ಚಾತುರ್ಮಾಸ್ಯ ವೃತ

ಚಾತುರ್ಮಾಸ್ಯ ವೃತ ಆಚರಣೆಯ ಹಿನ್ನಲೆ 

003-Sri_Vishnu

ಸನಾತನವಾದ ವೇದ ಪ್ರಪಂಚದಲ್ಲಿ ಸೂಚಿತವಾದ ಜೀವನ ಕ್ರಮದ ಅನ್ವಯ, ಸನ್ಯಾಸಾಶ್ರಮ ಸ್ವೀಕರಿಸಿದ ಯತಿಗಳಿಗೆ ಪ್ರತ್ಯೇಕವಾದ ವೃತ ನಿಯಮಗಳಿದ್ದು, ಅದರಲ್ಲಿ ಚಾತುರ್ಮಾಸ್ಯವೂ ಅತ್ಯಂತ ಪ್ರಮುಖವಾಗಿದೆ.
ಸನ್ಯಾಸಾಶ್ರಮ ಸ್ವೀಕರಿಸುವ ಯತಿಗಳು ಸಂಸಾರದ ಎಲ್ಲ ಬಂಧನಗಳಿಂದ ಮುಕ್ತರಾಗಿದ್ದು, ನಿಶ್ಚಿತವಾದ ನೆಲೆ ಹಾಗೂ ವಾಸಸ್ಥಾನ (ನಿವಾಸ) ಹೊಂದಿರುವದಿಲ್ಲ. ನಿತ್ಯ ಸಂಚಾರವೇ ಮುಖ್ಯ ಧರ್ಮವಾಗಿರುವ ಯತಿಗಳು, ಸಂಚಾರದೊಂದಿಗೆ ಪ್ರತಿನಿತ್ಯದ ಧರ್ಮ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಾರೆ. ಇಂತಹ ಯತಿಗಳಿಗೂ ವರ್ಷದ ಕೆಲವು ಕಾಲ ಸಂಚಾರವನ್ನು ತೊರೆದು, ಒಂದೇ ಸ್ಥಳದಲ್ಲಿ ವಾಸ್ತವ್ಯ ಮಾಡಬೇಕು ಎಂಬ ನಿಯಮಗಳನ್ನು ವೇದ ಪ್ರಪಂಚ ಜಾರಿಗೆ ತಂದಿದೆ. ಧಾರ್ಮಿಕ ಕಾರಣಗಳು : ಆಶಾಢ ಮಾಸ ಮಳೆಗಾಲದ ಅವಧಿಯಾಗಿದ್ದು, ಕ್ರಿಮಿಕೀಟಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಯತಿಗಳಲ್ಲಿ ಇರುವ ಭೂತದಯೆ (ಹಿಂಸಾ ವಿರೋಧಿ) ಮನೋಭಾವದ ಅಡಿ, ಯತಿಗಳ ಸಂಚಾರದಿಂದ ಯಾವದೇ ಕ್ರಿಮಿ ಕೀಟಾದಿಗಳಿಗೂ ತೊಂದರೆ, ಪ್ರಾಣ ಹಾನಿಯಾಗಬಾರದು. ಯಾವದೇ ಸಂದರ್ಭದಲ್ಲಿಯೂ ಯತಿಗಳು ವಾಸ್ತವ್ಯದ ಸ್ಥಳದಿಂದ ಹೊರಗೆ ಬರಬಾರದು ಎಂಬ ನಿಯಮಾವಳಿಗಳಿವೆ. ಚಾತುರ್ಮಾಸ್ಯದ ಅವಧಿಯ ಪೂರ್ಣ ಅಗತ್ಯವಾದ ಎಲ್ಲ ದಿನಬಳಕೆಯ ವಸ್ತುಗಳನ್ನೂ ಮುಂಚಿತವಾಗಿ ಸಂಗ್ರಹಿಸಿ ಇಟ್ಟುಕೊಳ್ಳುವ ಸಂಪ್ರದಾಯವೂ ಆಚರಣೆಯಲ್ಲಿದೆ.
ಶ್ರೀಮಠದಲ್ಲಿರುವ ಶಿಷ್ಯರ ಮೇಲೆ ಅನುಗ್ರಹ ಮುಖಿಗಳಾಗಿರುವ ಯತಿಗಳು, ಈ ಚಾತುಮಾಸ್ಯದ ಅವಧಿಯಲ್ಲಿ ಪಾಠ-ಪ್ರವಚನದ ಬಗ್ಗೆ ವಿಶೇಷ ಆಧ್ಯತೆ ನೀಡಬೇಕು. ಶಿಷ್ಯರ ಉನ್ನತಿಗಾಗಿ ವಿಶೇಷ ಕಾಳಜಿ ತೋರಬೇಕು. ನಿತ್ಯ ಸಂಚಾರವೂ ಇಲ್ಲದ ಕಾರಣ ಪಾಠ ಪ್ರವಚನಗಳು ಸಂಪೂರ್ಣಗೊಳ್ಳಬೇಕು ಎಂಬ ಉದ್ದೇಶವೂ ಈ ಆಚರಣೆಯ ಹಿನ್ನಲೆಯಲ್ಲಿದೆ.
ಪ್ರಾಚೀನ ಪರಂಪರೆಯಲ್ಲಿ ಶ್ರೀಮದ್ ಉತ್ತರಾಧಿಮಠದಲ್ಲಿ ನೀಡಲಾಗುವ ತಪ್ತ ಮುದ್ರಾಧಾರಣೆ ಕಾರ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಭಗವಂತನ ಚಿನ್ನೆಗಳನ್ನು ದೇಹದ ಮೇಲೆ ಮೂಡಿಸಿಕೊಂಡು, ಶರೀರದ ಮೇಲಿನ ವ್ಯಾಮೋಹವನ್ನು ತೊರೆಯಬೇಕು. ಈ ನಶ್ವರವಾದ ದೇಹವನ್ನು ದೇವರ ಸೇವೆಗೆ ಮೀಸಲಾಗಿರಿಸಬೇಕು ಎಂಬ ಚಿಂತನೆಗಳಿವೆ. ಚಾತುರ್ಮಾಸ್ಯದ ಅವಧಿಯಲ್ಲಿ ವಿಶೇಷವಾದ ತಪಃ ಶಕ್ತಿಯನ್ನು ಹೊಂದಿರುವ ಯತಿಗಳಿಂದ ತಪ್ತ ಮುದ್ರಾಧಾರಣೆಯನ್ನು ಶ್ರೀಮಠದ ಪರಂಪರೆಯ ಭಕ್ತರು ಪಡೆಯಲೇಬೇಕು ಎಂಬ ಸೂಚನೆ ಇದೆ. ಯತಿಗಳ ಶಿಷ್ಯರಿಗೆ ಈ ತಪ್ತ ಮುದ್ರಾ ಧಾರಣೆಯನ್ನು ಖಡ್ಡಾಯಗೊಳಿಸಲಾಗಿರುತ್ತದೆ. ಯತಿಗಳ ವಾಸ್ತವ್ಯದ ಸ್ಥಳಕ್ಕೆ ಬರುವ ಶ್ರೀಮಠದ ಎಲ್ಲ ಶಿಷ್ಯ ವರ್ಗ ಯತಿಗಳಿಂದ ತಪ್ತ ಮುದ್ರಾ ಧಾರಣೆಹೊಂದಲು ಈ ಆಚರಣೆ ಸಹಾಯಕವಾಗಿದೆ.
ಪ್ರಾಚೀನ ಪರಂಪರೆಯಲ್ಲಿ ಯತಿಗಳ ಸೇವೆಗೆ ವಿಶೇಷವಾದ ಪ್ರಾಮುಖ್ಯತೆ ನೀಡಲಾಗಿದೆ. ಅತ್ಯಂತ ನಿಷ್ಟೆ ಹಾಗೂ ಭಕ್ತಿಯಿಂದ ಯತಿಗಳ ಸೇವೆಯನ್ನು ನಿರಂತರವಾಗಿ ಮಾಡಿದಲ್ಲಿ ಉತ್ತಮ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯತಿಗಳ ಸಾಂಗತ್ಯ, ಮಂತ್ರೋಪದೇಶ ಹಾಗೂ ಜಪ ಧ್ಯಾನಗಳು ಅನಂತ ಫಲಗಳೊಂದಿಗೆ ಉತ್ತಮ ಸದ್ಗತಿಗೆ ಕಾರಣವಾಗುತ್ತದೆ ಎಂಬ ಚಿಂತನೆ ಈ ಆಚರಣೆಯ ಹಿಂದೆ ಇದೆ.
ಚಾತುರ್ಮಾಸ್ಯದ ಅವಧಿಯಲ್ಲಿ ದಿನನಿತ್ಯದ ಆಹಾರ ಕ್ರಮದಲ್ಲಿಯೂ ಅಮೂಲಾಗ್ರವಾದ ಬದಲಾವಣೆ ಕಾಣಬಹುದಾಗಿದೆ. ಆಷಾಢ ಮಾಸದಲ್ಲಿ ತರಕಾರಿಗಳ ಬಳಕೆಯನ್ನು ವರ್ಜಿಸಲಾಗಿದ್ದು, ಕೇವಲ ಒಣಗಿದ ಬೇಳೆ ಕಾಳು, ಧಾನ್ಯಗಳನ್ನು ಮಾತ್ರ ಬಳಸಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ತರಕಾರಿಗಳಲ್ಲಿಯೂ ಸೂಕ್ಷ್ಮಾಣು ಜೀವಿಗಳು, ಹುಳ ಹುಪ್ಪಡಿಗಳು ಇರುವ ಕಾರಣದಿಂದ ಈ ಆಚರಣೆ ಜಾರಿಗೆ ಬಂದಿದೆ. ಶ್ರಾವಣದಲ್ಲಿ ಮೊಸರು ಹಾಗೂ ಭಾದ್ರಪದ ಮಾಸದಲ್ಲಿ ಹಾಲಿನ ಬಳಕೆಯನ್ನು ತ್ಯಜಿಸಲಾಗುತ್ತದೆ. ಹಾಲು-ಮೊಸರು ಸಮೃದ್ದಿಯ ಸಂಕೇತವಾಗಿದ್ದು, ಇದನ್ನೂ ತ್ಯಜಿಸುವ ತನ್ಮೂಲಕವೂ ದೇಹ ಪೋಷಣೆಗೆ ಪ್ರಾಧಾನ್ಯತೆ ಕಡಿಮೆಯಾಗಲಿ ಎಂಬ ಚಿಂತನೆ ಈ ಆಚರಣೆಯಲ್ಲಿದೆ. ಆಶ್ವೀಜ ಮಾಸದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಶಾಸ್ತ್ರಗಳು ನಿರಾಕರಿಸಿದೆ. ಕೇವಲ ಕಂದ ಮೂಲ (ಗಡ್ಡೆ ಗೆಣಸುಗಳನ್ನು ಆಹಾರದ ರೂಪದಲ್ಲಿ ಬಳಸಲಾಗುತ್ತದೆ)
ಶ್ರಾವಣ ಮಾಸದಲ್ಲಿ ಮೊಸರಿನ ಬಳಕೆ ದೇಹದ ಪ್ರಕೃತಿಗೂ ಅಪಥ್ಯವಾಗಿದ್ದು, ಮೊಸರು ಹಾಲು ಕಫಕಾರಕ. ಆದ್ದರಿಂದ ಅದನ್ನು ತ್ಯಜಿಸಬೇಕು. ವಾತ, ಪಿತ್ತ, ಕಫ ಪ್ರಕೃತಿಯನ್ನು ತಡೆಗಟ್ಟಲೂ ಈ ಆಹಾರ ಕ್ರಮ ಅತ್ಯಂತ ವೈeನಿಕವಾಗಿದೆ. ಈ ಅವಧಿಯಲ್ಲಿ ಜೀರಿಗೆ, ಮೆಣಸಿನ ಕಾಳನ್ನು ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡುವದು ವಾತಾವರಣದ ಅನ್ವಯವೂ ಆರೋಗ್ಯದಾಯಕ ಎಂಬ ಅಭಿಪ್ರಾಯ ಆಯುರ್ವೆದ ವೈಧ್ಯರದ್ದಾಗಿದೆ.

ಕೃಪೆ ವನ್ ಇಂಢಿಯಾ

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು

Veda-Vyasa-Devaru-Acharya-Madhwa

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು :-

( ಸಂನ್ಯಾಸ ವಿಧಿ ವಿಧಾನಗಳು 3 ದಿನಗಳ ಪ್ರಕ್ರಿಯೆ )

ಅ) ಸಂನ್ಯಾಸ ಸ್ವೀಕಾರ ಮಾಡುವುದಕ್ಕೆ ಪೂರ್ವದಲ್ಲಿ ಸಜ್ಜನರ ಸಮಕ್ಷಮದಲ್ಲಿ ಗುರುಗಳು ಶಿಷ್ಯ ಸ್ವೀಕಾರ ಮಾಡುತ್ತಿದ್ದೇನೆಂದು ಫಲ ಮಂತ್ರಾಕ್ಷತೆ ಪಡೆಯಲೇಬೇಕು.

ಆ ) ಫಲ ಮಂತ್ರಾಕ್ಷತೆ ಸ್ವೀಕಾರ ಮಾಡಿದ ವ್ಯಕ್ತಿ ಆದಿನ ಉಪವಾಸದಿಂದ ಇರಬೇಕು.

ಇ) ಮರುದಿನ ಬೆಳಗ್ಗೆ ಪಿಂಡಪ್ರಧಾನ ಮಾಡಿ ತನ್ನ ಪಿತೃಗಳಿಗೆ ಸಂಬಂಧಪಟ್ಟ ಶ್ರಾದ್ಧಾದಿಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತನ್ನ ಮಗನಿಗೆ ಕೊಟ್ಟು ಇನ್ನುಮುಂದೆ ನನಗೂ – ಇವರಿಗೂ ಯಾವ ಸಂಬಂಧ ಇಲ್ಲವೆಂದು ಹೇಳಿ ಆ ಪಿಂಡವನ್ನು ತಮ್ಮ ಮಗನಿಗೆ ಒಪ್ಪಿಸುತ್ತಾರೆ. ಅದರಂತೆ ಅವರು ನಡೆಸಿಕೊಂಡು ಹೋಗುತ್ತಾರೆ. ಇಲ್ಲಿಗೆ ಪ್ರಾಪಂಚಿಕ ಸಂಬಂಧಗಳು ಕಡೆದು ಹೋಗುತ್ತದೆ!!

ಈ) ಕ್ಷೌರ ನಂತರ ಜೀವತ್ ಶ್ರಾದ್ಧ ” ಆತ್ಮಶ್ರಾದ್ಧ ” ಮಾಡಿಕೊಳ್ಳುತ್ತಾರೆ. ಆದಿನ ಅವರನ್ನು ಯಾರೂ ನೋಡಕೂಡದು. ಕಾರಣ ಅವರು ಒಂದುರೀತಿ ಪ್ರೇತಯಿದ್ದಂತೆ. ಆದಿನವೂ ಉಪವಾಸದಿಂದ ಇರಲೇಬೇಕು ಮತ್ತು ಜಾಗರಣೆ ಮಾಡಬೇಕು!!

ಉ ) ಮರುದಿನ ಬೆಳಿಗ್ಗೆ ಪ್ರಾತಃ ಕಾಲದಲ್ಲಿ ಎದ್ದು…

ಶಾಕಲ ಹೋಮ
ಪುರುಷಸೂಕ್ತ ಹೋಮ
ವಿರಜಾ ಹೋಮ

ಮಾಡಿ ಸಂನ್ಯಾಸವನ್ನು ಸ್ವೀಕರಿಸಬೇಕು! ಇಲ್ಲಿಗೆ ಸಂನ್ಯಾಸ ಸ್ವೀಕಾರ ಮಾಡಿದ ವ್ಯಕ್ತಿಗೂ – ಸಂನ್ಯಾಸ ಪೂರ್ವದಲ್ಲಿ ಅವರ ಸಂಬಂಧಿಗಳಾದ : –

ಹೆಂಡತಿ – ಮಕ್ಕಳು – ಬಂಧು ಬಾಂಧವರ ಸಂಬಂಧ ಸಂಪೂರ್ಣವಾಗಿ ಕಡೆದು ಹೋಗುತ್ತದೆ.

” ಸಂನ್ಯಾಸ ಪದ್ಧತಿ ”

ನಿಮಜ್ಯಾಪ್ಸು ತ್ರಿಶೋ ಹಸ್ತೇ ಶಿಖಾಯಜ್ಞೋಪವೀತಕೇ ।
ಆದಾಯ ಜುಹುಯಾದಪ್ಸು ಪ್ರಣವೇನ ಸಮಾಹಿತಃ ।।

ನೀರಿನಲ್ಲಿ ಮೂರುಬಾರಿ ಮುಳುಗಿ ಶಿಖಾ ಯಜ್ಞೋಪವೀತಗಳನ್ನು ಕೈಯಲ್ಲಿ ಹಿಡಿದು ” ವನಾಯ ಸ್ವಾಹಾ ” ಇತ್ಯಾದಿ ಮಂತ್ರಗಳಿಂದ ಅವುಗಳನ್ನು ನೀರಿನಲ್ಲಿ ವಿಸರ್ಜಿಸಿ ಪ್ರಣವದಿಂದ ಭಗವಂತನನ್ನು ಧ್ಯಾನಿಸಬೇಕು.

ಅನಂತರ ಗೃಹಸ್ಥನು ನೀಡುವ ಕಟಿಸೂತ್ರ – ಕೌಪೀನ ಮತ್ತು ಎರಡು ಕಾವಿಶಾಟಿಗಳನ್ನು ಧಾರಣೆ ಮಾಡಿಕೊಂಡು..

” ಸಂನ್ಯಸ್ತಂ ಮಯಾ ”

ಎಂದು ವಿಧಿವತ್ತಾಗಿ ಗಟ್ಟಿಯಾಗಿ ಉಚ್ಛರಿಸಬೇಕು.

ಅನಿರುದ್ಧಾದಿ ಭಗವದ್ರೂಪಗಳಿಗೆ ವಿತ್ತ – ದೇಹ – ಇಂದ್ರಿಯ – ಅಂತಃಕರಣ – ಸ್ವಾತ್ಮಗಳನ್ನು ಸಮರ್ಪಿಸಬೇಕು.

ಮಂತ್ರ ಪೂರ್ವಕ ದಂಡಧಾರಣೆ ಮಾಡಬೇಕು.

ಪ್ರಣವಮಂತ್ರೋಪದೇಶಕರಾದ ಗುರುಗಳು ತಪ್ತ ಮುದ್ರಾಧಾರಣೆ – ತಂತ್ರಸಾರೋಕ್ತ ವಿಧಿಯಿಂದ ಪೂಜಿತವಾದ ” ಪಟ್ಟಾಭಿಷೇಕ ಕಲಶ ತೀರ್ಥ ” ವನ್ನು ಶಿಷ್ಯನಿಗೆ ” ಶಂ ನಃ ” ಇತ್ಯಾದಿ ಸೂಕ್ತ ಮತ್ತು ಪುರುಷ ಸೂಕ್ತ ಮಂತ್ರಗಳಿಂದ ಪ್ರೋಕ್ಷಿಸಿ ಅಭಿಷೇಕ ಮಾಡಬೇಕು.

” ವಿಷ್ಣು ಸರ್ವೋತ್ತಮತ್ವ ಪ್ರತಿಪಾದನೆ ಪ್ರತಿಪಾದನೆ ಜೀವನದ ಉಸಿರಾಗಿರಬೇಕೆಂದೂ; ನಿರಂತರ ಶಾಸ್ತ್ರ ಪಾಠ ಪ್ರವಚನ ಪ್ರಣವ ಜಪಾದ್ಯಾಸಕ್ತನಾಗಿ ಸಂನ್ಯಾಸ ದೀಕ್ಷೆಯ ಉದ್ಧೇಶವನ್ನು ಸಾರ್ಥಕಗೊಳಿಸಬೇಕೆಂದೂ ” ಉಪದೇಶಿಸಬೇಕು!

ಸಂನ್ಯಾಸ ಪಡೆದ ವ್ಯಕ್ತಿಯಲ್ಲಿ ” ಸಾಕ್ಷಾತ್ ಶ್ರೀಮನ್ನಾರಾಯಣನ ಸನ್ನಿಧಾನ ” ಬರುತ್ತದೆ. ಆಗ ಅವರು ” ಸಾರ್ವಜನಿಕ ಸ್ವತ್ತು ” ಆಗುತ್ತಾರೆ. ಇವರಿಗೆ ಯಾವುದೇ ಪ್ರಾಪಂಚಿಕ ಸಂಬಂಧಗಳು ಇರುವುದಿಲ್ಲ. ಇವರು ಸರ್ವತಂತ್ರ ಸ್ವತಂತ್ರರಾಗುತ್ತಾರೆdownload (1)

ಕೃಪೆ  – Nagraj

ಶ್ರೀ ವಿಜಯೀ೦ದ್ರತೀರ್ಥಕೃತ ದುರಿತಾಪಹಾರ ಸ್ತೋತ್ರ – ಒಂದು ಚಿಂತನೆ

ಶ್ರೀ ವಿಜಯೀ೦ದ್ರತೀರ್ಥಕೃತ ದುರಿತಾಪಹಾರ ಸ್ತೋತ್ರ – ಒಂದು ಚಿಂತನೆ

Viji1

ಅದ್ಭುತ ಪ್ರತಿಭೆಯೇ ಮೂರ್ತಿವೆತ್ತಂತಿರುವ ಅಮಾನುಷಚರ್ಯೆಯ ಶ್ರೀ ವಿಜಯೀ೦ದ್ರತೀರ್ಥರು ರಚಿಸಿರುವ ” ದುರಿತಾಪಹಾರ ಸ್ತೋತ್ರ ” ವು ಕಲಿಕಾಲದ ಮಾನವನು ಪ್ರತಿನಿತ್ಯವೂ ತನ್ನ ತಲೆ ಮೊದಲು ಕಾಲಿನ ವರೆಗಿನ ಅವಯವಗಳಿಂದ ಮಾಡುತ್ತಿರುವ ಪಾಪರಾಶಿಯ ಕೋಶದಂತಿದೆ.

ಕಣ್ಣು – ಕಿವಿ – ನಾಲಿಗೆ – ಮೂಗು – ಚರ್ಮ ಎಂಬ ಐದು ಜ್ಞಾನ ಜನಕ ಇಂದ್ರಿಯಗಳಿಂದಲೂ; ವಾಕ್ – ಪಾಣಿ – ಪಾದ – ಪಾಯು – ಗುಹ್ಯೇ೦ದ್ರಿಗಳೆಂಬ ಐದು ಕರ್ಮೇಂದ್ರಿಗಳ ಮೂಲಕವಾಗಿಯೂ ನಿರಂತರದಲ್ಲೂ ಆಗುತ್ತಲಿರುವ ಪಾಪ ಕರ್ಮಗಳ ಮರ್ಮ ಸೂಚಕವಾದ ಸೂಜಿಗಲ್ಲಿನಂತಿದೆ.

ಎಂಥಹ ಕಡು ಪಾಪಿಯೂ ಕಲ್ಲಿನಂತಹಾ ಮನಸ್ಸನ್ನೂ ಸಹ ಪಾಪ ಮಾರ್ಗದಿಂದ ಸನ್ಮಾರ್ಗಕ್ಕೆ ಸೆಳೆಯುವ ಸುಳಿಯಂತಿದೆ.

ಘೋರವಾದ ಪಾಪ ಕೂಪದಲ್ಲಿ ಮುಳುಗಿದವನಾಗಿ; ಪಾಪಾ೦ಧಕಾರಮಯ ಜೀವಿಯಾಗಿ; ಪಾಪ ಪರಂಪರೆಯಿಂದ ಬಿಡುಗಡೆ ಪಡೆಯುವ ಹೆದ್ದಾರಿಯನ್ನು ಕಾಣದಂತೆ ದುಃಖಮಯವಾದ ಜೀವನ ಯಾತ್ರೆಯಲ್ಲಿ ನಿತ್ಯವೂ ನೊಂದು – ನೊಂದು; ಬೆಂದು ಬೆಂಡಾಗಿ ಬಳಲಿದ ಓರ್ವ ಕಡು ಪಾಪಿಯ ಹೇಯವಾದ ಜೀವನ ಚರ್ಯೆಯನ್ನು ಮನಮುಟ್ಟುವಂತೆ ವರ್ಣಿಸಿರುವ; ಪಶ್ಚಾತ್ತಾಪ ಬುದ್ಧಿಯಿಂದ ಪರಿತಪಿಸಿ; ಕಟ್ಟಕಡೆಗೆ ವೈರಾಗ್ಯ ಬುದ್ಧಿಯಿಂದ ಸರ್ವೋತ್ತಮನಾದ ಪರಮಾತ್ಮನಲ್ಲಿ ಮೊರೆಹೋಗುವವನ ಪಶ್ಚಾತ್ತಾಪ ಪ್ರಾಯಶ್ಚಿತ್ತ ರೂಪವಾದ ಕಾವ್ಯದಂತಿದೆ ಈ ” ಪಾಪವಿಮೋಚನ ಸ್ತೋತ್ರ “!

ವಿವಿಧ ಸಾಂಸಾರಿಕ ದುಃಖದರ್ಶನದಿಂದ ಪರಿತಪ್ತನಾದವನ ದಾರುಣ ಸಂಗತಿಯನ್ನು ಎತ್ತಿ ತೋರಿಸಿ; ಮೋಕ್ಷ ಯೋಗ್ಯನಾದ ಚೇತನನ ವಿಷಯದಲ್ಲಿ ದಯಾಮಯನಾದ ಪರಮಾತ್ಮನ ಅನುಗ್ರಹ ವಿಶೇಷದಿಂದ ಅನಾದಿಯಾದ ಭಾವರೂಪವಾದ ಅಜ್ಞಾನವೆಂಬ ( ಅವಿದ್ಯೆಯೆಂಬ ); ಶಯ್ಯೆಯಿಂದ ( ಹಾಸಿಗೆಯಿಂದ ); ಉತ್ತಿಷ್ಠತ ( ಎದ್ದೇಳಿ ); ಜಾಗ್ರತ ( ಎಚ್ಚೆರಗೊಳ್ಳಿ ); ಪ್ರಾಪ್ಯ ವರಾನ್ ನಿಬೋಧತ ( ಶ್ರೇಷ್ಠರಾದ ನಿಯತ ಗುರುಗಳನ್ನು ಸೇರಿ ಪರಮಾತ್ಮನನ್ನು ತಿಳಿಯಿರಿ ) ಎಂಬ ದಿವ್ಯ ವೇದವಾಣಿಯ ಸೂಚನೆಯಂತೆ ಪೂರ್ವ ಪುಣ್ಯ ಪ್ರಭಾವದಿಂದ ಎಚ್ಚರಗೊಂಡು ಆ ದಯಾಮಯನಾದ; ಸರ್ವಸ್ವಾಮಿಯಾದ; ಸರ್ವೋತ್ತಮನಾದ ದೇವದೇವನಲ್ಲಿ ಅಡಿಗಡಿಗೂ; ನುಡಿನುಡಿಗೂ; ಕ್ಷಣಕ್ಷಣಕ್ಕೂ ಅಂಗಲಾಚಿ ಕ್ಷಮೆ ಬೇಡಿ, ಅನನ್ಯ ಗತಿಕನಾಗಿ ಪ್ರಾರ್ಥಸಿ ” ತ್ವಮೇವ ಶರಣಂ ಮಮ ” ( ನೀನೇ ಗತಿ ); ಶ್ರೀಮನ್ನಾರಾಯಣನ ಎರಡೂ ಪಾದಗಳನ್ನು ಶರಣು ಹೊಂದಿದ್ದೇನೆ, ಮೋಕ್ಷಾಪೇಕ್ಷಿಯಾದ ನಾನು ಮೋಕ್ಷಪ್ರದನಾದ ಮುಕುಂದನನ್ನು ಶರಣನನ್ನಾಗಿ ಹೊಂದುತ್ತೇನೆ ಎಂಬುದಾಗಿ ತಿಳಿಸುವ ಮಾತ್ರಾರ್ಥದ ಸಾರರೂಪವಾಗಿದೆ!!

” ಭಗವದ್ಗೀತಾ ” ದಲ್ಲಿ…

ಸರ್ವಧರ್ಮಾನ್ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚ: ।।

ವೇದ ವಿರುದ್ಧಗಳಾದ ಇತರ ಧರ್ಮಗಳನ್ನು ದೂರ ಮಾಡಿ ( ಬಿಟ್ಟು ) ಅಥವಾ ಸರ್ವ ಅವೈಷ್ಣವ ಧರ್ಮಗಳನ್ನು ಪರಿತ್ಯಜಿಸಿ ಫಲಾಪೇಕ್ಷೆ ಇಲ್ಲದಂತೆ; ನಾನೇ ( ಶ್ರೀ ಕೃಷ್ಣ ಪರಮಾತ್ಮನಾದ ನಾನೇ ) ಸರ್ವೋತಮನೆಂದು ತಿಳಿದು; ಅವನಲ್ಲಿಯೇ ( ಶ್ರೀ ಕೃಷ್ಣನಲ್ಲಿಯೇ ) ಸರ್ವದಾ ಸರ್ವಾಧಿಕವಾದ ಪ್ರೇಮ ಪೂರ್ವಕವಾಗಿ ಸರ್ವವನ್ನೂ ಅರ್ಪಿಸುತ್ತಾ; ಮೂರು ಬಗೆಯಾದ ಸಕಲ ವ್ಯಾಪಾರಗಳನ್ನೂ ಅವನ ( ಶ್ರೀ ಕೃಷ್ಣನ ) ಪೂಜಾ ರೂಪವಾದುದೆಂದು ಅನುಸಂಧಾನ ಮಾಡುತ್ತಾ…

ನಾನು ಅವನ ದಾಸ ( ಭಕ್ತ ); ಅವನಾದರೂ ನನ್ನ ಸ್ವಾಮಿ ( ರಕ್ಷಕ ) ಎಂದು ನೆನೆಯುತ್ತಾ ನಿತ್ಯ ನಿರಂತರದಲ್ಲೂ ಸರ್ವೋತ್ತಮನಾದ ಆ ಪರಮಾತ್ಮನ ( ಶ್ರೀ ಕೃಷ್ಣನ ) ಅನುಚಿಂತನೆಯೆಂಬ ಶರಣಾಗತಿಯನ್ನು ಪಡೆದ ಭಕ್ತನನ್ನು ನಾನು ಸರ್ವ ಪಾಪಗಳಿಂದಲೂ ಬಿಡುಗಡೆ ಮಾಡುತ್ತೇನೆಂಬ ಪರಮಾತ್ಮನ ದಿವ್ಯ ಸಂದೇಶದಂತೆಯೂ; ಆತ್ಯಂತಿಕವಾಗಿ ಆ ಸರ್ವೋತ್ತಮನಾದ ಶ್ರೀ ಕೃಷ್ಣ ಪರಮಾತ್ಮನಲ್ಲಿ ಶರಣಾಗತಿಯನ್ನು ಸಂಸಾರ ಕ್ಲೇಶ ಪರಂಪರೆಯಾದ ಪ್ರಕ್ಷುಬ್ಧವಾದ ಮನಸ್ಸಿಗೆ ಭಕ್ತಿ ಭಾವವನ್ನು ಖಚಿತ ಪಡಿಸುವ; ಪ್ರಾಥಿಸುವ ಪ್ರಾರ್ಥನೆ ಮಾಲಿಕೆಯಂತಿದೆ.

ಇಡೀ ಮಾನವನ ಜೀವನ ಕ್ಷೆತ್ರದಲ್ಲಿ ವಿಚ್ತ್ರವಾದ ವ್ಯತ್ಯಾಸವನ್ನುಂಟು ಮಾಡಿ ಆ ಬಿಂಬ ರೂಪಿಯಾದ ದಯಾಮಯನ ದಿವ್ಯ ಸಾಕ್ಷಾತ್ಕಾರಕ್ಕೆ ತಕ್ಕಂತಹ ಅಡಿಪಾಯದಂತಿರುವ ವೈರಾಗ್ಯದಿಂದ ದೃಢವಾದ ಭಕ್ತಿಯನ್ನು ತಂದುಕೊಡುವ ಶರಣಾಗತಿ ಮಂತ್ರದ ರಹಸ್ಯವಾದ ಸ್ವಾರಸ್ಯದಿಂದ ಗರ್ಭಿತವಾಗಿದೆ.

ಇದೇ ವಿಷಯವು ” ಶ್ರೀ ಮಹಾವಿಷ್ಣು ಪುರಾಣ ” ದಲ್ಲಿ…

ಸರ್ವೋತ್ತಮತ್ವ ವಿಜ್ಞಾನ ಪೂರ್ವಂ ತತ್ರ ಮನಃ ಸದಾ ।
ಸರ್ವಾಧಿಕ ಪ್ರೇಮಯುಕ್ತ೦ ಸರ್ವಸ್ಯಾತ್ಮ ಸಮರ್ಪಣಮ್ ।।
ಅಖಂಡಾ ತ್ರಿವಿಧಾ ಪೂಜಾ ತದ್ರತೈವ ಸ್ವಭಾವತಃ ।
ರಕ್ಷತೀತ್ಯೇವ ವಿಶ್ವಾಸಃ ತದೀಯೋsಹಮಿತಿ ಸ್ಮೃತಃ ।।
ಶರಣಾಗತಿರೇಷಾ ಸ್ಯಾತ್ ವಿಷ್ಣು: ಮೋಕ್ಷಫಲಪ್ರದಾ ।।

” ರಾಮಾಯಣ ” ದಲ್ಲಿ….

ಸಕೃದೇವ ಪ್ರಪನ್ನಾಯ ತವಾಸ್ಮೀತಿ ಚ ಯಾಚತೇ ।
ಅಭಯಂ ಸರ್ವಭೂತೇಭ್ಯೋ ದದಾಮೇತಾತ್ ವ್ರತಂ ಮಮ ।।

ದೃಢ ಚಿತ್ತದಿಂದ ಏಕಾಂತ ಭಕ್ತಿಯಿಂದ ಯಾವನು ನನ್ನನ್ನೇ ಮೊರೆಹೋಗುತ್ತಾನೆಯೋ ಅವನಿಗೆ ಯಾವ ಕಾಲದಲ್ಲಿಯೂ ಯಾರಿಂದಲೂ ಭಯವಿಲ್ಲವೆಂದು ಶ್ರೀ ರಾಮಚಂದ್ರದೇವರು ಭಕ್ತನಿಗೆ ಅಭಯವನ್ನಿತ್ತಿರುತ್ತಾನೆ!!

” ಶ್ರೀ ಪಂಚರಾತ್ರ ” ದಲ್ಲೂ ಶರಣಾಗತಿಯ ಪ್ರಕಾರಗಳು….

ಅನುಕೂಲಸ್ಯ ಸಂಕಲ್ಪ: ಪ್ರತಿಕೂಲಸ್ಯ ವರ್ಜನಮ್ ।
ರಕ್ಷಿಪ್ಯತೀತಿ ವಿಶ್ವಾಸಃ ಗೋಪ್ತೃತ್ವವರಣಂ ತಥಾ ।।
ಆತ್ಮ ನಿಕ್ಷೇಪಕಾರ್ಪಣ್ಯೇ ಷಡ್ವಿಧಾ ಶರಣಾಗತಿ: ।
ಅನಯಾ ಚ ಪ್ರಪತ್ಯಾ ಮಾಂ ಆಕಿಂಚನೈಕಪೂರ್ವಕಮ್ ।।
ಮಾಂ ಮಾಧವ ಇತಿ ಜ್ಞಾತ್ವಾ ಮಾಂ ಗಚ್ಛೇಚ್ಛರಣಂ ನರಃ ।
ಏವಂ ಮಾಂ ಶರಣಂ ಗಚ್ಛನ್ ಕೃತಕೃತ್ಯೋ ಭವಿಷ್ಯತಿ ।।

ಹಿಂದೆ ಹೇಳಿದ ಶ್ರೀ ಮಹಾವಿಷ್ಣು ಪುರಾಣ ವಚನದ ಅಭಿಪ್ರಾಯವೇ ಈ ಪಂಚರಾತ್ರದ ವಚನವಾಗಿದೆ. ಈ ಪಾಪವಿಮೋಚನ ಸ್ತೋತ್ರದ ಮುಖ್ಯ ತಾತ್ಪರ್ಯವೂ ಸಹ ಇದೇ ಆಗಿರುತ್ತದೆ.

viji 2

ಈ ಸ್ತೋತ್ರವು ಹಿಂದೆಯೇ ಹೇಳಿರುವಂತೆ ಘೋರವಾದ ಈ ಕಲಿಕಾಲದಲ್ಲಿ ಪಾಪಿಗಳ ಸಂಸರ್ಗದಿಂದ ನಿತ್ಯವೂ ಪಾಪ ಕಾರ್ಯಾಚರಣೆಯಿಂದ ಅತಿಯಾಗಿ ನೊಂದಿರುವ ಮಾನವನ ಜೀವನ ಕ್ಷೇತ್ರದಲ್ಲಿ ನಡೆಯಲಿರುವ ನೈಜ ಸಂಗತಿಯನ್ನು ಚಿತ್ರಿಸಿರುವುದಾಗಿದೆ.

ಅತಿಕ್ರಾಂತಸುಖಾ: ಕಾಲಾ: ಪ್ರತ್ಯುಪಸ್ಥಿತದಾರುಣಃ ।
ಶ್ವ: ಶ್ವ: ಪಾಪೀಯದಿವಾಸಃ ಪೃಥುವೀ ಗತಯೌವನಾ ।।

ಎಂಬ ಭಾರತಾಚಾರ್ಯರ ವಚನದಂತೆ ಈ ಕಲಿಯುಗದಲ್ಲಿ ಇಂದಿಗಿಂತಲೂ ಮುಂದೆ ಮುಂದಿನ ದಿನಗಳು ಪಾಪೀಯ ದಿನಗಳಾಗಿವೆ.

ಈ ಸ್ತೋತ್ರದಲ್ಲಿ ಹೇಳಿರುವ ” ಮೇ, ಮಮ, ಅಹಂ ” ಇತ್ಯಾದಿ ಪದಗಳು ಇದನ್ನು ಮಾನವನಿಗೆ ಸಂಬಂಧಿಸತಕ್ಕುದ್ದಾಗಿದೆ.

” ಪಾಪೊsಹಂ ಪಾಪಕರ್ಮಾಹಂ ಪಾಪಾತ್ಮ ಪಾಪಸಂಭವಃ ”

ಇತ್ಯಾದಿ ವಾಕ್ಯಗಳಿಂತಿವೆಯೆಂಬುದನ್ನು ಗಮನಿಸಬೇಕು.

” ಜಿತಂತೇ ಸ್ತೋತ್ರ ” ದಲ್ಲಿ…

ಋಜುವರೇಣ್ಯರೂ; ಜೀವೋತ್ತಮರಾದ ಶ್ರೀ ಚತುರ್ಮುಖ ಬ್ರಹ್ಮದೇವರು ಸರ್ವೋತ್ತಮನಾದ ಶ್ರೀ ಹರಿಯನ್ನು ಕುರಿತು…

ಕೃಶ೦ ಕೃತಘ್ನ೦ ದುಷ್ಕರ್ಮಕಾರಿಣಂ ಪಾಪಭಾಜನಮ್ ।
ಅಪರಾಧಸಹಸ್ರಾಣಾಮಾಕರಂ ವಿಷಯಾರ್ಣವಾಮಗ್ನ೦ ।।

ಇತ್ಯಾದಿಯಾಗಿ ತಮ್ಮನ್ನು ಬಣ್ಣಿಸಿಕೊಂಡಂತೆ ಇಲ್ಲಿಯೂ ತಿಳಿಯಬೇಕು.

ಶ್ರೀ ಇಂದ್ರದೇವರ ಅಂಶ ಸಂಭೂತರೂ, ಸರ್ವಜ್ಞ ಕಲ್ಪರಾದ ಶ್ರೀ ಜಯತೀರ್ಥರು ಭಕ್ತಿ ವಿವಶರಾಗಿ ಶ್ರೀಮದ್ವಿಷ್ಣುತತ್ತ್ವ ನಿರ್ಣಯ ಟೀಕಾ ಅಂತ್ಯದಲ್ಲಿ…

ಆನಂದತೀರ್ಥ ಭಗವದ್ವಚಸಾಂ ವಿಶಿಷ್ಟ
ವ್ಯಾಖ್ಯಾನ ಕರ್ಮಣಿ ಸುರಾ ಅಧಿಕಾರಿಣೋsತ್ರ ।
ಯನ್ಮಾದೃಶೋsಪಿ ಯತತೇ ತದತೀವ ಹಾಸ್ಯ೦
ಕಿಂ ನಾಮ ಭಕ್ತಿವಿವಶಸ್ಯ ವಿಭೂಷಣಂ ತತ್ ।।

ಎಂದು ತಮ್ಮನ್ನು ಕುರಿತು ಆಡಿಕೊಂಡಿರುವಂತೆ ತಿಳಿಯಬೇಕು ಮತ್ತು ಸ್ವಾಹಂಕಾಖಂಡನ ದೃಷ್ಟಿಯಿಂದಲೂ ಈ ತೆರನಾಗಿ ಹೇಳಿಕೊಂಡಿರುವುದಕ್ಕೆ ಅನೇಕ ಉದಾಹರಣೆಗಳಿವೆ.

ಶ್ರೀಮದಾನುವ್ಯಾಖ್ಯಾನಕ್ಕೆ ವ್ಯಾಖ್ಯಾನವಾದ ” ಶ್ರೀಮನ್ನ್ಯಾಯಸುಧಾ ” ಗ್ರಂಥದಲ್ಲಿ ಶ್ರೀ ಜಯತೀರ್ಥರು ಶ್ರೀಮದಾಚಾರ್ಯರ ಗ್ರಂಥಕ್ಕೆ ತಕ್ಕ ವ್ಯಾಖ್ಯಾನವನ್ನು ರಚಿಸಲು ಇತರ ಶಾಸ್ತ್ರ ಪಾಂಡಿತ್ಯ ಪ್ರೌಢಿಮೆಯು ತಮ್ಮಲ್ಲಿ ಶ್ರೀ ಹರಿವಾಯುಗುರುಗಳ ಅನುಗ್ರಹದಿಂದಿರುವುದಾದರೂ ಆರಂಭದಲ್ಲಿ…

” ನ ಶಬ್ದಾಬ್ದೌ ಗಾಢಾ: ”

ಇತ್ಯಾದಿಯಾಗಿ ಹೇಳಿರುವಂತೆಯೂ; ಕೊನೆಯೆಲ್ಲಿಯೂ…

ಪರಂ ಶ್ರದ್ಧಾ ಜಾಡ್ಯಾದಕೃಷಿ ಕೃತಿಮಾಚಾರ್ಯ ವಚಸಿ
ಸ್ಖಲನ್ನಪ್ಯೇತಸ್ಮಾಜ್ಜಗತಿ ನಹಿ ನಿಂದೋsಸ್ಮಿ ವಿದುಷಾಮ್ ।।

ಎಂಬುದಾಗಿಯೂ, ಶ್ರೀ ಪರಿಮಳಾಚಾರ್ಯರೂ ಕೂಡಾ ” ಪರಿಮಳ ” ದ ಅಂತ್ಯದಲ್ಲಿ…

ಜ್ಞಾನಾಬ್ಧಿರಪ್ಯವಾದೀದ್ಯತ್ ಸ್ಖಲತ್ಯಂ ಸ್ವಾತ್ಮನಃ ಸದಾ ।
ಮಾದೃಶಾನಾ೦ ಸ್ಖಲತ್ವಂ ಕಿಂ ವಾಚ್ಯಂ ಕ್ಷಾಮ್ಯಂತು ತದ್ಬುಧಾ: ।।

ಎಂದು ನುಡಿದಿರುತ್ತಾರೆ!!

ಇದೇ ರೀತಿ ಆಯಾ ಪಾಪಗಳನ್ನು ಮಾಡಿರುವ ಭಕ್ತನು ಆಡಿರುವ ಮಾತಿನೆಂತೆಂಬ ದೃಷ್ಟಿಯಿಂದ ಮತ್ತು ಅಭಿಪ್ರಾಯದಿಂದ ಶ್ರೀ ವಿಜಯೀ೦ದ್ರತೀರ್ಥರು ಅದನ್ನು ಎತ್ತಿ ತೋರಿಸುತ್ತಾರೆ!!

ಶ್ರೀ ಜಗನ್ನಾಥದಾಸರು…

ಸಿರಿ ರಮಣ ತವ ಚರಣ ಸೇವೆ ।
ದೊರಕುವುದು ಹ್ಯಾಂಗಿನ್ನು ।
ಪರಮ ಪಾಪಿಷ್ಠ ನಾನು ।।

ಎಂದು ನಮ್ಮನ್ನು ಉಧ್ದೇಶಿಸಿ ಹೇಳಿದ್ದಾರೆ!!

ಎಂಥಹಾ ಸದಾಚಾರಿಯೇ ಆಗಲೀ ಆತನಿಂದ ಈ ಭೂಲೋಕದಲ್ಲಿನ ಮಾನವ ಜನ್ಮದಲ್ಲಿ ಅತಿ ತೃಪ್ತಿಕರವಾಗಿ ಲೇಶಮಾತ್ರವೂ ಲೋಪವಿಲ್ಲದಂತೆ ವಿಧಿ ವಿಹಿತಗಳಾದ ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸಲು ಸಾಧ್ಯವೇ ಇಲ್ಲ. ಈ ವಿಷಯವನ್ನು ” ಶ್ರುತಿ ” ಯಲ್ಲಿ…

ವಿಧಿವಿಹಿತಂ ಸರ್ವಮನುತಿಷ್ಠ೦ತಿ ದೇವಾ: ।
ಅರ್ಥಮೇವ ಮುನಯಃ ।
ದಶಾಂಶತೋ ಮನುಷ್ಯಾ: ।। ಇತಿ ಶ್ರುತೇ: ।।

ದಿನದಿನಕ್ಕೂ ರಾಶಿರಾಶಿಯಾಗಿ ಗುಂಪು ಕೂಡುತ್ತಿರತಕ್ಕ ಪ್ರಾರಭ್ದೇತರಗಳಾದ ಸಂಚಿತ ಕರ್ಮಗಳ ನಾಶಕ್ಕೆ ಬಿಂಬ ರೂಪಿಯಾದ ಪರಮಾತ್ಮನ ದಿವ್ಯ ಸಾಕ್ಷಾತ್ಕಾರ ಹೊರತು ಬೇರೆ ಉಪಾಯವೇ ಇಲ್ಲ.

ಗೀತಾಚಾರ್ಯನಾದ ಶ್ರೀ ಕೃಷ್ಣನ ವಚನ…

ಜ್ಞಾನಾಗ್ನಿ: ಸರ್ವಕರ್ಮಾಣಿ ಭಸ್ಮಸಾತ್ಕುರುತೇsರ್ಜುನಃ ।

ಜೀವನಿಗಿರತಕ್ಕ ಸಕಲ ಬಂಧಗಳಿಗೂ ಆ ಪರಮಾತ್ಮನೇ ಸ್ವಾಮಿಯಾಗಿದ್ದಾನೆ. ಬಂಧಕನೂ – ಬಂಧವಿಮೋಚಕನೂ – ಕೈವಲ್ಯದಾತನೂ ಆದ ಪರಬ್ರಹ್ಮನೆಂದೆನಿಸಿರುವ ಆ ಸರ್ವೋತ್ತಮನನ್ನೇ ಶರಣು ಹೋಗಬೇಕು. ಅನ್ಯಥಾ ಗತಿಯೇ ಇಲ್ಲ!!

” ದುರಿತಾಪಹಾರ ಸ್ತೋತ್ರ ”

ಆದಿ :

ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೈಕವತ್ಸರೇಪಿ ।
ಅಪಿ ತು ಕ್ರಿಯತೇ ಸದಾಘಪೂಗ: ಪ್ರತಿಯಾಮಂ ಸಕಲೇಂದ್ರಿಯೈರ್ಮೂಕುಂದ: ।।

ಅಂತ್ಯ :

ವಿಜಯೀ೦ದ್ರಯತೀಶ್ವರೋ ವ್ಯತಾನೀತ್ ಸ್ತುತಿಮೇನಾ೦ ದುರಿತಾಪಹಾಂ ಮುರಾರೇ: ।
ಪರಮಾದರತಃ ಸದಾ ಪಠದ್ಯೋ ನಿಖಿಲೈ: ಪಾಪಚಯೈರ್ಭವೇ ಸ ಮುಕ್ತ: ।।

ಇಂಥಹಾ ದುರಿತಾಪಹರ ಸೂತ್ರವನ್ನು ಯಾರು ನಿತ್ಯವೂ ಪಠಿಸುತ್ತಾರೆಯೋ ಅಂಗಲಾಚಿ ಪರಮಾತ್ಮನನ್ನು ಬಿಡುತ್ತಾರೆಯೋ ಅವರು ಕೃಪಾ ಸಮುದ್ರನಾದ ಶ್ರೀ ಹರಿಯ ಪರಮಾನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಲೇಶಮಾತ್ರವೂ ಸಂದೇಹವಿಲ್ಲ!

ಅಂಥಹಾ ಶ್ರೀ ಹರಿಯ ವಿಶೇಷ ಅನುಗ್ರಹದಿಂದ ಕ್ರಮವಾಗಿ ಬಿಂಬ ಸಾಕ್ಷಾತ್ಕಾರವನ್ನು ಪಡೆದು ಅಪರೋಕ್ಷಜ್ಞಾನಿ ಎನಿಸಿಕೊಂಡವರಾಗಿ ಸಕಲ ಸಂಚಿತ ಪಾಪ ರಾಶಿಯಿಂದ ಬಿಡುಗಡೆಯನ್ನು ಪಡೆಯುತ್ತಾರೆ.

ಸಕಲ ಸ್ತೋತ್ರಗಳಿಗೆಲ್ಲ ಆದರ್ಶಪ್ರಾಯವಾಗಿರುವ ಪಶ್ಚಾತ್ತಾಪ ರೂಪವಾದ ಪ್ರಾಯಶ್ಚಿತ್ತದಂತಿರುವ ಈ ಬಗೆಯಾದ ಸ್ತೋತ್ರರತ್ನವನ್ನು ರಚಿಸಿ ಸಕಲ ಮುಮುಕ್ಷುಗಳಿಗೂ ಎಚ್ಚರಿಕೆಯನ್ನಿತ್ತು ಪರಮೋಪಕಾರವನ್ನು ಮಹಾನುಭಾವರಾದ ಶ್ರೀ ವಿಜಯೀ೦ದ್ರತೀರ್ಥರಿಗೆ ಭಕ್ತಿ ಶ್ರದ್ಧೆಗಳಿಂದ ನಮಿಸಿ ಪ್ರಾರ್ಥಿಸೋಣ!!

ವಿಜಯೀ೦ದ್ರರಾಯರ ವೃಂದಾವನದಲಿ ।
ವಿಜಯಸಖ ಸರ್ವ ಜಗಜ್ಜನ್ಮಾದಿಕರ್ತ ।
ಅಜಭಾವಾದಿಗಳಿಂದ ಸೇವ್ಯ ಶ್ರೀ ನರಹರಿ ಇಹನು ।
ವಿಜಯೀ೦ದ್ರಗುರು ಅಂತರ್ಯಾಮಿ ವಾಂಛಿತಪ್ರದನು ।।

” ವಿ ” ಯೆಂದರೆ ವಿಠಲ ಜ್ಞಾನ ಮುದವೀವ ।
” ಜ ” ಯೆಂದರೆ ಜಯವು ಪುಟ್ಟು ಸಾವಿಲ್ಲ ।
” ಯೀ ” ಯೆಂದರೆ ಜ್ಞಾನಕರ್ಮ ಪೂಜಾ ಫಲವು ।
” ಇಂದ್ರ ” ಯೆಂದರೆ ಐಶ್ವರ್ಯ ಸುಖವೇವ ।।

” ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರಾದ ಶ್ರೀ ಕಂಬಾಲೂರು ರಾಮಚಂದ್ರತೀರ್ಥರು…”

ಪದವಾಕ್ಯ ಪ್ರಮಾಣಜ್ಞಾನ್ ಸೌಶೀಲ್ಯಾದ್ಯುಪ ಸೇವಿತಾನ್ ।
ವಿಜಯೀ೦ದ್ರಯತೀಂದ್ರಾಖ್ಯಾನ್ ಸೇವೇ ವಿದ್ಯಾ ಗುರೂನ್ಮಮ ।।

post courtesy – ಪಲ್ಲವಿ ನಾಗರಾಜು ಹಾವೇರಿ

meditation

meditation

16.jpg

Narsimha purana mentions meditation as dhyana (nidhidhyasana) : continuous flow of thought towards an object. Note the term flow of thought.

The popular conception is : meditation is onepointedness on a particular object(more often a scene ).The method usually prescribed is :

  • Calm your mind
  • Focus on your favorite object
  • Try to hold on to it.
  • Make use of props like symbol OM
  • Or some serene music
  • Or some preach think as to all negative energy flow out of your system like smoke
  • Many more such concepts which are not in sync with Purana.

let us analyze these before arriving at correct meaning of meditation.

Can our minds be calmed through effort ?

According to upanishads :

Mind is everwandering ,it is chanchal by nature. It keeps switching between thoughts sometimes without link.

Consider a monkey , a restless creature. What if this monkey has drunk loads of wine.it becomes unstable , its actions are unpredictable.And if this monkey is bit by scorpion , it is going to jump from pillar to post without any control ,creating havoc in the neighborhood.

Mind is like this monkey which has drunk the wine of ego(ahankara /mada) upon that it is bit by the scorpion of jealousy(asuya).it jumps from pillar to post to acquire the objects of its desire.(moha). This monkey called mind is additionally caught in greed(lobha).

Is it really possible to bring such a monkey under control ?virtually impossible without the help of other agencies.If we say we can bring ourselves out of this mind delusion ,then this monkey should be able to calm himself without external help. This is unimaginable.

So the first point itself seems dizzy (calm your mind /de-stress ).

Focus, on what ? can u hold a static scene in my mind ? It is against the nature of mind.
Hold on to it , what purpose is it going to solve ,well holding on to object of desire gives control over object of desire. But is that the goal of meditation.
Make use of OM , does this calm the mind , definitely not. Music is a definite disturbance , moreover if I am restless over a issue in the office or my business , no props are going to calm my mind except solution to my issue.
Drive out negative energy : in a happy frame of mind , especially when I am riding a horse named success, temporarily I feel I can control my mind and feel as though driving away unwanted thoughts. This is not meditation.
So what is meditation.
Ashtanga Yoga starts with

  • Yama : discipline like getting up early ,cleanliness
  • niyama : satya (speaking truth), asteya,(not stealing),tushti(being satisfied)
  • asana :posture padmasana , veerasana,sukhasana.
  • pratyahara : turning your mind away ,
  • pranayama: breathing techniques. Rechaka ,puraka, kumbhaka,
  • dharana :
  • dhyana
  • samadhi .

The first five are preparatory towards the meditation. It helps in bringing the person to a state of mind to practise anything that he wants to? Whether he can sustain with his markata mind.!
To sustain he should undertake Pranayama.
Two types of pranayama. :keval and sagarbha,
Kevala is without any mantra and sagarbha is with mantra like dasha pranava gayatri with bramhashirasa etc.
Remembering Hari and vayu in kumbhaka is what the secret behind sustaining the concentration.This ignites narsimha jwala in the hrudaya that burns away all the sins.
The hrudaya that we are talking about is one found in sushumna and not the heart organ.
When the mind is pure , sense organs satisfied , chitta is still ,the mind can contemplate on the known issues. Known through sense organs . Nothing new can be contemplated of which we do not have knowledge. Hence to contemplate , we need knowledge about GOD. This is obtained by shravana , ie. Listening to the Guru.
Guru teaches as various qualities of GOD. Student has to contemplate, manana
Manana gives rise to doubts. Doubts have to be cleared by Guru.
Once doubts are cleared ,the topic on which we have contemplated becomes steadfast,it cannot disappear from mind. When we repeatedly contemplate on this steadfast knowledge , we experience difficulty in holding on to this contemplation, this phase is known asDharana.
When this contemplation is continuous without break it is called Dhyana.

When in dhyana if we are not able to hear external sounds then it is Samadhi.

However in the astanga , each one is superior to the previous eg niyama is superior to yama , pranayama is superior to asana pratyahara. Dhyana is superior to pranayama etc.
Dhyana can be done only on few qualities of God that we know of; but swadhyaya gives more knowledge of the God. Hence once should ever engage in the study of sashtras (swadhyaya) . It yields more punya than dhyana. Above all Adhyaapan , teaching the shastras , leads even more punya than swadhyaya, because it spreads the message of the GOD. Lord loves those more who speak about him.
Thus Sage Mudgal says, “with two hands raised above shoulders , I declare that there is nothing in this world greater than Narayana(earlier now or in the future), knowing which nothing in this three worlds is impossible to achieve.”

” Alodya shastrani cha punah punaha ,nasti narayana samo devo ,

na bhuto na bhavishyati Yetena satyavakyena sarvarthan sadhyamyaham”

 

srikrishnarpanamastu

ದೇವರ ಅಭಿಷೇಕದ ತೀರ್ಥಗಳು ಮತ್ತು ಮಹತ್ವಗಳು..”!

ದೇವರ ಅಭಿಷೇಕದ ತೀರ್ಥಗಳು ಮತ್ತು ಮಹತ್ವಗಳು

14.jpg

೧. ಗಣೇಶ ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿನವೂ ಕುಡಿಯುತ್ತಾ ಬಂದರೆ “ಅಸ್ತಮಾ ಖಾಯಿಲೆ, ಗೂರಲು ಕಾಯಿಲೆ, ಶ್ವಾಸಕೋಶದ ರೋಗಗಳು ನಿವಾರಣೆಯಾಗುತ್ತದೆ ..

೨. “ಈಶ್ವರ ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿನ ಕುಡಿಯುತ್ತಾ ಬಂದರೆ, BP, STRESS, TENSION, mental torture , ಒಳ ರೋಗಗಳು, ಮನಸ್ಸಿನ ರೋಗಗಳು ನಿವಾರಣೆಯಾಗುತ್ತದೆ ..

೩. ಶ್ರೀ ಲಕ್ಷ್ಮೀನಾರಾಯಣರ ಅಭಿಷೇಕದ ತೀರ್ಥವನ್ನು ಪ್ರತಿದಿವಸ ಕುಡಿಯುತ್ತಾ ಬಂದರೆ, ದಂಪತಿಗಳು ಸುಖವಾಗಿ ಬಾಳುತ್ತಾರೆ, ಸಮಸ್ತ ಮನಸ್ತಾಪಗಳು, ಈಗೋ ಸಮಸ್ಯೆಗಳು ನಿವಾರಣೆಯಾಗುತ್ತದೆ ..

೪. ವಿಷ್ಣು ದೇವರ ತೀರ್ಥವನ್ನು ಪ್ರತಿದಿವಸ ಕುಡಿಯುತ್ತಾ ಬಂದರೆ “ಸಮಸ್ತ ರೋಗ ನಿವಾರಣೆಯಾಗುತ್ತದೆ, ಮನೆಯಲ್ಲಿ ಎಲ್ಲರೂ ಸನ್ಮಾರ್ಗಿಗಳಾಗುತ್ತಾರೆ, ಸರ್ವದೋಷಗಳೂ ನಿವಾರಣೆಯಾಗುತ್ತದೆ ..

೫. ಶ್ರೀ ಮಹಾಲಕ್ಷ್ಮೀ ಅಭಿಷೇಕದ ನೀರನ್ನು ಮುಖಕ್ಕೆ ಹಚ್ಚಿಕೊಂಡರೆ ಸಮಸ್ತ ಮೊಡವೆ ದೋಷಗಳು ನಿವಾರಣೆಯಾಗಿ, ಮುಖವು ತುಂಬಾ ಕಳೆಯಿಂದ ಕೂಡಿರುತ್ತದೆ..

೬. ಶ್ರೀ ಗಾಯತ್ರೀದೇವಿಯ ಅಭಿಷೇಕದ ನೀರನ್ನು ಪ್ರತಿದಿವಸವೂ ಕುಡಿಯುತ್ತಾ ಬಂದರೆ, “ಫಿಟ್ಸ್ ” ಖಾಯಿಲೆ ನಿವಾರಣೆಯಾಗುತ್ತದೆ, ವಾಕ್ಸಿದ್ಧಿಯಾಗುತ್ತದೆ, ಸಕಲ ಮಂತ್ರಗಳು ಸಿದ್ಧಿಯಾಗುತ್ತದೆ..

೭. ಈಶ್ವರ ದೇವರಿಗೆ “ತ್ರಯೋದಶಮುಖ ರುದ್ರಾಕ್ಷಿ” ಹಾಕಿ ಅಭಿಷೇಕ ಮಾಡಿಸಿ, ಪ್ರತಿದಿವಸ ಕುಡಿಯುತ್ತಾ ಬಂದರೆ, ಶ್ವೇತಕುಷ್ಟ, ರಕ್ತಕುಷ್ಟ ರೋಗಗಳು, ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ ..

೮. ಸುಬ್ರಹ್ಮಣ್ಯ ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿನವೂ ಕುಡಿಯುತ್ತಾ ಬಂದರೆ, ಸರ್ಪದೋಷಗಳು, ಕುಜದೋಷಗಳೂ ನಿವಾರಣೆಯಾಗುತ್ತದೆ ..
ಸಮಸ್ತ ರೋಗಗಳೂ ನಿವಾರಣೆಯಾಗುತ್ತವೆ, ಮಕ್ಕಳು ಭಯಪಡೊದು ,ಬೆಚ್ಚು ಬೀಳೋದು ನಿವಾರಣೆಯಾಗುತ್ತದೆ ..
ಕೆಟ್ಟಕನಸುಗಳು ಬರುವ ದೋಷಗಳು ನಿವಾರಣೆಯಾಗುತ್ತದೆ ..

೯. “ಸಾಲಿಗ್ರಾಮ ” ದೇವರ ತೀರ್ಥವನ್ನು ಪ್ರತಿದಿವಸ ಕುಡಿಯುತ್ತಾ ಬಂದರೆ ಸಮಸ್ತ ಒಳ ರೋಗಗಳು, ಹೊರ ರೋಗಗಳೂ, ಜಾತಕ ದೋಷಗಳೂ, ಶಾಪಗಳೂ ನಿವಾರಣೆಯಾಗುತ್ತದೆ ..
ಅಭಿಷೇಕದ ತೀರ್ಥವನ್ನು ಪ್ರತಿದಿನ ದೇವರನ್ನು ಧ್ಯಾನಿಸಿ “ಕಣ್ಣಿಗೆ” ಒರೆಸಿಕೊಂಡರೆ ಸಮಸ್ತ ನೇತ್ರದೋಷಗಳೂ ನಿವಾರಣೆಯಾಗಿ, ಕಣ್ಣು ಶುಭ್ರವಾಗಿರುತ್ತದೆ..

೧೦. “ಶ್ರೀ ಮಹಾವಿಷ್ಣುವಿಗೆ ತುಳಸೀ ನೀರಿನಿಂದ ಅಭಿಷೇಕ ಮಾಡಿಸಿ, ಆ ತುಳಸೀ ತೀರ್ಥವನ್ನು ಪ್ರತಿದಿನ ಕುಡಿಯುತ್ತಾ ಬಂದರೆ ..
ಸಮಸ್ತ ಮಾಟ ಮಂತ್ರ ದೋಷ, ದೃಷ್ಟಿದೋಷ, ನಿವಾರಣೆಯಾಗುತ್ತದೆ …
ಯಾರು ಮಾಟ ಮಂತ್ರಗಳು ಮಾಡಿದರೂ ಎಲ್ಲವೂ ನಿಷ್ಫಲವಾಗುತ್ತದೆ..

೧೧. “ಶ್ರೀ ಚಕ್ರ”ದೇವರ ಅಭಿಷೇಕದ ತೀರ್ಥವನ್ನು ಪ್ರತಿದಿವಸವೂ ಕುಡಿಯುತ್ತಾ ಬಂದರೆ.
ಶ್ರೀ ಲಲಿತಾ ತ್ರಿಪುರಸುಂದರೀ ದೇವಿಯ ಪೂರ್ಣ ಅನುಗ್ರಹವಾಗಿ, ಆ ದೇವಿಯೇ ನಮ್ಮನ್ನು ರಕ್ಷಿಸುತ್ತಾರೆ..
ಆ ದೇವಿಯೇ ನಮ್ಮನ್ನು ರಕ್ಷಿಸುವಾಗ ಫಲ ಹೇಳಲು ಅಸಾಧ್ಯ..

ದೇಹ ಒಂದು ಅಗ್ನಿಕುಂಡ

ದೇಹ ಒಂದು ಅಗ್ನಿಕುಂಡ

13.jpg

ಸತ್ತಪ್ರಾಣಿಗಳ ದೇಹವನ್ನು ಒಂದು ಪ್ರದೇಶದಲ್ಲಿ ಉರಿಯುತ್ತಿರುವ ಅಗ್ನಿಗೆ ಹಾಕಿದರೆ ಅದನ್ನು ಶವ ಸಂಸ್ಕಾರ ಅಂಥ ಕರೆಯುತ್ತಾರೆ; ಹಾಗೂ ಆ ಪ್ರದೇಶ ಸ್ಮಶಾನ ಭೂಮಿಯಾಗಿ ಮಾರ್ಪಡುತ್ತದೆ.
ಅದೇ ಒಂದು ಪ್ರದೇಶದಲ್ಲಿ ಉರಿಯುತ್ತಿರುವ ಬೆಂಕಿಗೆ ಹಣ್ಣು ಹಂಪಲು, ಗಿಡಮೂಲಿಕೆ, ದವಸ ಧಾನ್ಯಗಳನ್ನು ಹಾಗೂ ತುಪ್ಪವನ್ನು ಅರ್ಪಿಸಿದರೆ ಅದು ಅಗ್ನಿಕುಂಡ ಯಜ್ಞವಾಗಿ ಮಾರ್ಪಡುತ್ತದೆ; ಹಾಗೂ ಆ ಭೂಮಿ ಪವಿತ್ರ ಭೂಮಿಯಾಗಿ ಮಾರ್ಪಡುತ್ತದೆ.

ಅದೇ ರೀತಿ ಮಾನವನ ಶರೀರದಲ್ಲಿ ಕೂಡಾ ಅಗ್ನಿಯಿದೆ. ಅದೇ ಜಠರಾಗ್ನಿ. ಶರೀರದಲ್ಲಿರುವ ಜಠರಾಗ್ನಿಗೆ ನೀವು ಸತ್ತಪ್ರಾಣಿಗಳು ಅಂದರೆ ಮಾಂಸಹಾರವನ್ನು ಅರ್ಪಿಸಿ ಶರೀರವನ್ನು ಸ್ಮಶಾನ ಭೂಮಿಯನ್ನಾಗಿ ಮಾಡಿ ಕೊಳ್ಳುತ್ತಿರೋ ಅಥವಾ ಜಠರಾಗ್ನಿಗೆ ಹಣ್ಣು ಹಂಪಲು, ತುಪ್ಪ, ದವಸ ಧಾನ್ಯಗಳನ್ನು, ಗಿಡಮೂಲಿಕೆಗಳನ್ನು ಅರ್ಪಿಸಿ ಶರೀರವನ್ನು ಯಜ್ಞ ಭೂಮಿಯನ್ನಾಗಿ ಮಾರ್ಪಡಿಸಿ ಕೊಳ್ಳುತ್ತೀರೋ ಅದು ನಿಮಗೆ ಬಿಟ್ಟ ವಿಷಯ. ಹಿಂದೆ ಅನೇಕ ಲೇಖನಗಳಲ್ಲಿ ಹೇಳಿರುವ ಸಾಧನೆ ಮಾಡಲು, ಸಪ್ತ ಚಕ್ರಗಳನ್ನು ಜಾಗ್ರತೆಗೊಳಿಸಲು ಶರೀರ ಯಜ್ಞ ಭೂಮಿಯನ್ನಾಗಿ ಮಾರ್ಪಡಿಸಿ ಕೊಳ್ಳುವುದು ಬಹಳ ಮುಖ್ಯ. ಇದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗಾಗಿ ಮಾತ್ರ. ಏನಾದರೂ ಮಾಡುವುದಿದ್ದರೆ ಈ ಮಾನವ ಜನ್ಮದಲ್ಲೇ ಸಾಧನೆ ಮಾಡಿ. ಮಾನವ ಜನ್ಮಕ್ಕಾಗಿ ದೇವಾದಿ ದೇವತೆಗಳು ಹಂಬಲಿಸುತ್ತಿರುತ್ತಾರೆ. ಆದ್ದರಿಂದ ಮಾನವ ಜನ್ಮ ಅತೀ ಉನ್ನತವಾದ ಜನ್ಮ. ಇದನ್ನು ದುರುಪಯೋಗ ಪಡಿಸಿ ಕೊಳ್ಳದಿರಿ..

: ಷೋಡಶ ಸಂಸ್ಕಾರಗಳು: ಷೋಡಶ ಎಂದರೆ ಹದಿನಾರು. ಮನುಷ್ಯ ಹುಟ್ಟಿನಿಂದ ನಿಧನದವರೆಗೆ ಆಚರಿಸುವ ಸಂಸ್ಕಾರಗಳಿಗೆ ಸನಾತನ ಧರ್ಮದಲ್ಲಿ ಷೋಡಶ ಸಂಸ್ಕಾರವೆಂದು ಕರೆಯಲಾಗುತ್ತದೆ. ಆ ಸಂಸ್ಕಾರಗಳು ಯಾವುವೆಂದು ಸಂಕ್ಷಿಪ್ತವಾಗಿ ತಿಳಿದು ಕೊಳ್ಳೋಣ.

ಒಂದು – ಗರ್ಭಾದಾನ ಸಂಸ್ಕಾರ: ಉತ್ತಮ ಸಂತಾನದ ಪ್ರಾಪ್ತಿಗಾಗಿ ಮೊದಲ ಸಂಸ್ಕಾರ.

ಎರಡು – ಪುಂಸವನ ಸಂಸ್ಕಾರ: ಗರ್ಭದಲ್ಲಿರುವ ಶಿಶುವಿನ ಬೌದ್ಧಿಕ ಹಾಗೂ ಮಾನಸಿಕ ಶ್ರೇಯಸ್ಸಿಗಾಗಿ ಗರ್ಭಾದಾನದ ನಂತರ ಎರಡನೇ ಅಥವಾ ಮೂರನೇ ತಿಂಗಳಿನಲ್ಲಿ ನಡೆಸುವ ಸಂಸ್ಕಾರ.

ಮೂರು – ಸೀಮಂತೋನ್ನಯನ ಸಂಸ್ಕಾರ: ಗರ್ಭಿಣಿಯ ಮನ ಸಂತೃಪ್ತಿ ಹಾಗೂ ಗರ್ಭಸ್ಥ ಶಿಶುವಿನ ಸೌಭಾಗ್ಯ ಪ್ರಾಪ್ತಿಗಾಗಿ ಗರ್ಭಾದಾನದ ನಂತರ ಎಂಟನೇ ತಿಂಗಳಿನಲ್ಲಿ ನಡೆಸುವ ಸಂಸ್ಕಾರ.

ನಾಲ್ಕು – ಜಾತಕರ್ಮ ಸಂಸ್ಕಾರ: ನವಜಾತ ಶಿಶುವಿನ ಬುದ್ಧಿ, ಬಲ, ಆರೋಗ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ನಡೆಸುವ ಸಂಸ್ಕಾರ.

ಐದು – ನಾಮಕರಣ ಸಂಸ್ಕಾರ: ೧೧ ದಿನಗಳ ನಂತರ ನವಜಾತ ಶಿಶುವಿಗೆ ಸಮುಚಿತವಾದ ಹೆಸರನ್ನಿಡುವ ಸಂಸ್ಕಾರ.

ಆರು – ನಿಷ್ಕ್ರಮಣ ಸಂಸ್ಕಾರ: ನವಜಾತ ಶಿಶು ದೀರ್ಘಕಾಲ ಧರ್ಮ, ಕುಲ ಮರ್ಯಾದೆಯನ್ನು ರಕ್ಷಿಸಲಿ ಹಾಗೂ ಲೋಕದ ಸಮಸ್ತ ಸುಖಗಳನ್ನು ಅನುಭವಿಸಲೆಂಬ ಉದ್ದೇಶದಿಂದ ಆಚರಿಸುವ ಸಂಸ್ಕಾರ.ಇದನ್ನು ಶಿಶು ಹುಟ್ಟಿದ ನಾಲ್ಕನೇ ತಿಂಗಳಿನಲ್ಲಿ ನಡೆಸ ತಕ್ಕದ್ದು.

ಏಳು – ಅನ್ನಪ್ರಾಶನ ಸಂಸ್ಕಾರ : ಶಿಶುವಿಗೆ ಪ್ರಪ್ರಥಮವಾಗಿ ಅನ್ನವನ್ನು ತಿನ್ನಿಸುವುದು. ಇದನ್ನು ಆರನೇ ತಿಂಗಳಿನಲ್ಲಿ ನಡೆಸ ಬೇಕು.

ಎಂಟು – ಚೂಡಾಕರ್ಮ (ಕೇಶ ಮುಂಡನ) ಸಂಸ್ಕಾರ : ಶಿಶುವಿನ ಬೌದ್ಧಿಕ, ಮಾನಸಿಕ, ಶಾರೀರಿಕ ವಿಕಾಸಕ್ಕಾಗಿ ಹುಟ್ಟಿನ ನಂತರ ಮೊದಲನೆಯ, ಮೂರನೆಯ ಅಥವಾ ಐದನೇ ವರ್ಷದಲ್ಲಿ ಮಗುವಿನ ತಲೆಗೂದಲನ್ನು ತೆಗೆಸುವ ಸಂಸ್ಕಾರ.

ಒಂಬತ್ತು – ವಿದ್ಯಾರಂಭ ಸಂಸ್ಕಾರ: ಮಗುವಿನ ವಿದ್ಯಾಭ್ಯಾಸವನ್ನು ಆರಂಭಿಸುವ ಸಂಸ್ಕಾರ.

ಹತ್ತು – ಕರ್ಣವೇಧ ಸಂಸ್ಕಾರ : ದೈಹಿಕ ಆರೋಗ್ಯಕ್ಕಾಗಿ ಕಿವಿಯನ್ನು ಚುಚ್ಚುವ ಸಂಸ್ಕಾರ.

ಹನ್ನೊಂದು – ಉಪನಯನ ಸಂಸ್ಕಾರ : ಮಗುವಿನ ದೀರ್ಘಾಯುಷ್ಯಕ್ಕಾಗಿ ನಡೆಸುವ ಸಂಸ್ಕಾರ.

ಹನ್ನೆರಡು – ವೇದಾರಂಭ ಸಂಸ್ಕಾರ: ಜ್ಞಾನ ವರ್ಧನೆಗಾಗಿ ವೇದ, ಶಾಸ್ತ್ರಗಳನ್ನು ಕಲಿಯುವ ಸಂಸ್ಕಾರ.

ಹದಿಮೂರು – ಕೇಶಾಂತ ಸಂಸ್ಕಾರ: ವೇದಾಧ್ಯಯನ ಮಾಡಿ ಗುರುಕುಲದಿಂದ ವಿದಾಯ ಹೇಳುವಾಗ ಮಾಡುವ ಸಂಸ್ಕಾರ.

ಹದಿನಾಲ್ಕು – ಸಮಾವರ್ತನ ಸಂಸ್ಕಾರ : ಗೃಹಸ್ಥಾಶ್ರಮ ಪ್ರವೇಶ ಮಾಡುವ ಇಚ್ಛೆಯಿಂದ ನಡೆಸುವ ಸಂಸ್ಕಾರ.

ಹದಿನೈದು – ಪಾಣಿಗ್ರಹಣ ಸಂಸ್ಕಾರ : ವಿವಾಹವಾಗುವ ಸಂಸ್ಕಾರ.

ಹದಿನಾರು – ಅಂತ್ಯೇಷ್ಟಿ ಸಂಸ್ಕಾರ : ವ್ಯಕ್ತಿಯ ನಿಧನದ ನಂತರ ಮಾಡುವ ಸಂಸ್ಕಾರ.

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ ತತ್ತ್ವಪ್ರಕಾಶಿಕಾ & ಅಣುಭಾಷ್ಯಗಳ ವ್ಯಾಖ್ಯಾನ

” ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ ತತ್ತ್ವಪ್ರಕಾಶಿಕಾ & ಅಣುಭಾಷ್ಯಗಳ ವ್ಯಾಖ್ಯಾನ “

12

” ಶ್ರೀ ರಾಘವೇಂದ್ರವಿಜಯ ಮಹಾಕಾವ್ಯ ” ದಲ್ಲಿ….

ಸ್ನಾತವಾನತ ಬುಧೈಃ ಸಹ ಕೃಷ್ಣಾ ನಿಮ್ನಗಾಪಯಸಿ ನಿರ್ಜಿತಾಮರಃ ।
ತತ್ತಟೇ ಜಯಗುರೂದಿತಟೀಕಾಂ ವ್ಯಾಕೃತಾಪಿ ಯತಿರಾಡಣುಭಾಷ್ಯಮ್ ।।

ವಿವರಣೆ :

ನಿರ್ಜಿತಮಾರಃ = ಮನ್ಮಥನನ್ನು ಜಯಿಸಿದ ( ಅತ್ಯಂತ ಸುಂದರರಾದ );

ಯತಿರಾಟ್ = ಯತಿಚಕ್ರವರ್ತಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು;

ಅಥ = ವಿಜಯನಗರ ಸಂಚಾರಾನಂತರದಲ್ಲಿ;

ಬುಧೈಃ ಸಹ = ಪಂಡಿತರಿಂದ ಕೂಡಿಕೊಂಡು;

ಕೃಷ್ಣಾ ನಿಮ್ನಗಾಪಯಸಿ ಸ್ನಾತವಾನ್ = ಕೃಷ್ಣಾ ನದಿಯ ಜಲದಲ್ಲಿ ಸ್ನಾನ ಮಾಡಿದಂತಹರು ಆದರು!

ತತ್ತಟೇ = ಆ ಕೃಷ್ಣಾ ನದಿಯ ತೀರದಲ್ಲಿ;

ಜಯಗುರೂದಿತಟೀಕಾಂ = ಶ್ರೀ ಜಯತೀರ್ಥರು ಆಚಾರ್ಯ ಮಧ್ವರ ಶ್ರೀ ಬ್ರಹ್ಮಸೂತ್ರಭಾಷ್ಯಕ್ಕೆ ಮಾಡಿದ ” ತತ್ತ್ವಪ್ರಕಾಶಿಕಾ ಟೀಕೆ ” ಗೆ ” ತತ್ತ್ವಪ್ರಕಾಶಿಕಾ ಭಾವದೀಪ ” ;

ಅಪಿ = ಮತ್ತು

ಅಣುಭಾಷ್ಯಂ = ಸರ್ವ ಶಾಸ್ತ್ರಾರ್ಥ ಸಂಗ್ರಹವೆಂಬ ಅಣುಭಾಷ್ಯಕ್ಕೆ ” ತತ್ತ್ವ ಮಂಜರೀ ” ಯನ್ನೂ

ವ್ಯಾಕೃತ = ವ್ಯಾಖ್ಯಾನಿಸಿದರು!!

ವಿಜಯ ನಗರದಲ್ಲಿ ವಾದಿ ನಿಗ್ರಹ, ಶಿಷ್ಯಾನುಗ್ರಹಗಳನ್ನು ಮಾಡಿದ ಅನಂತರ ಸೌಂದರ್ಯದಲ್ಲಿ ಮನ್ಮಥನನ್ನೂ ಮೀರಿಸಿದ ಯತಿಚಕ್ರವರ್ತಿಗಳಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಅನೇಕ ವಿದ್ವಾಂಸರ ಸಂಗಡ ಯಾತ್ರೆ ಮಾಡುತ್ತಾ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿದರು.

ಆ ಕೃಷ್ಣಾ ನದಿಯ ದಡದಲ್ಲಿಯೇ ವಾಸ ಮಾಡುತ್ತಾ ಅವರು ಶ್ರೀಮದಾಚಾರ್ಯರ ಬ್ರಹ್ಮಸೂತ್ರಭಾಷ್ಯಕ್ಕೆ ಶ್ರೀಮಟ್ಟೇಕಾಕೃತ್ಪಾದರು ಮಾಡಿದ ” ತತ್ತ್ವ ಪ್ರಕಾಶಿಕಾ ” ಯೆಂಬ ಟೀಕೆಗೆ ” ಭಾವದೀಪ ” ಯೆಂಬ ಟಿಪ್ಪಣಿಯನ್ನು ಬರೆದರು ಹಾಗೂ ಶ್ರೀಮದಾಚಾರ್ಯರು ರಚಿಸಿರುವ ” ಅಣುಭಾಷ್ಯ ” ಯೆಂಬ ಗ್ರಂಥಕ್ಕೆ ” ತತ್ತ್ವಮಂಜರೀ ” ಯೆಂಬ ವ್ಯಾಖ್ಯಾನವನ್ನು ಬರೆದರು.

ಶ್ರೀಮನ್ಮಧ್ವಾಚಾರ್ಯರ ” ಬ್ರಹ್ಮಸೂತ್ರ ಭಾಷ್ಯೆ ” ದ ಟೀಕೆ ಶ್ರೀ ಜಯತೀರ್ಥರ ” ತತ್ತ್ವಪ್ರಕಾಶಿಕಾ “.

” ತತ್ತ್ವಪ್ರಕಾಶಿಕಾ ” ಮೇಲೆ ಶ್ರೀ ರಾಯರು ರಚಿಸಿದ ವ್ಯಾಖ್ಯಾನ ” ಭಾವದೀಪ “.

ಶ್ರೀ ರಾಯರ ಟಿಪ್ಪಣಿ ಕೇವಲ ಶ್ರೀ ಜಯತೀರ್ಥರ ವಾಕ್ಯಗಳ ಭಾವವನ್ನು ಮಾತ್ರ ಹೇಳುವುದಲ್ಲದೇ ಶ್ರೀಮದಾಚಾರ್ಯರ ವಾಕ್ಯದ ಭಾವವನ್ನೂ ಪ್ರಕಟಿಸುವುದು. ಆದ್ದರಿಂದ ಇದಕ್ಕೆ ” ಭಾವದೀಪ ” ಯೆಂಬ ಹೆಸರು ಅನ್ವರ್ಥಕವಾಗಿದೆ.

ಶ್ರೀ ವಾದೀಂದ್ರತೀರ್ಥರು ” ಗುರುಗುನಸ್ತವನ ” ದಲ್ಲಿ..

ಪ್ರಾಯಃ ಪ್ರಾಗನ್ಯದೀಯಾತನುತರವಿವೃತಿ ಗ್ರಂಥವಾಸೋವಿಹೀನಾ
ಹ್ರೀಣಾ ನಾದರ್ಶಿ ಧೀರೈರಪಿ ಕಿಲ ಯುವತಿರ್ಭಾಷ್ಯಟೀಕಾಭಿಧಾನಾ ।
ಅದ್ಯಶ್ರೀರಾಘವೇಂದ್ರವ್ರತಿಕೃತವಿವೃತಿ ಪ್ರೌಢಕೌಶೇಯಾ ರತ್ನಂ
ಸ್ನೇಹಾಯುಕ್ತಂ ವಸಾನಾ ವಿಹರತಿ ಸುಧಿಯಾಮಗ್ರತಃ ಸ್ವೈರಿಣೀವ ।।

ಯುವತಿಯರಿಗೆ ಆಕರ್ಷಣೀಯವಾಗಿ ಕಾಣಬೇಕಾದರೆ ವಸ್ತ್ರ ಬಹು ಮುಖ್ಯವಾದದ್ದು. ವಸ್ತ್ರ ಅತಿ ಚಿಕ್ಕದೂ ಆಗಬಾರದೂ ಅಥವಾ ಅತಿ ದೊಡ್ಡದೂ ಆಗಬಾರದು. ಈ ಅಚ್ಚುಕಟ್ಟಾದ ಸುಂದರವಾದ ವಸ್ತ್ರ ವಿನ್ಯಾಸವು ಯುವತಿಯ ಹಾವಭಾವ ಪ್ರದರ್ಶನಕ್ಕೆ ಅನುಕೂಲವಾಗಿರುವುದು. ಆ ಆಹಭಾವಗಳನ್ನು ಕಂಡ ರಸಿಕ ಸಂತೋಷದಿಂದ ನಲಿಯುತ್ತಾನೆ.

ಶ್ರೀ ಜಯತೀರ್ಥರ ” ಟೀಕೆ ” ಎಂಬ ಯುವತಿಗೆ ಶ್ರೀ ರಾಘವೇಂದ್ರತೀರ್ಥರು ತೊಡಿಸಿದ ರೇಷ್ಮೆಯ ಸುಂದರ ವಸ್ತ್ರ ” ಭಾವದೀಪ “.

ಇದರಿಂದ ” ತತ್ತ್ವಪ್ರಕಾಶಿಕಾ ” ತನ್ನ ಅಭಿಪ್ರಾಯವನ್ನು ಪಂಡಿತರ ಮುಂದೆ ವ್ಯಕ್ತ ಪಡಿಸಲು ಸಹಕಾರಿಯಾಗಿದೆ. ಪಂಡಿತರು ” ಭಾವದೀಪ ” ದ ಸಹಾಯದಿಂದ ” ತತ್ತ್ವಪ್ರಕಾಶಿಕೆ ” ಯ ಅಭಿಪ್ರಾಯವನ್ನರಿತು ಸಂತೋಷ ಪಡುತ್ತಿದ್ದಾರೆ.

ಟಿಪ್ಪಣಿ ( ಭಾವದೀಪ ) ಅಚ್ಚುಗಟ್ಟಾಗಿರುವುದರಿಂದ ಅಪಾರ್ಥವಾಗಲು ಅವಕಾಶವಿಲ್ಲ. ಶ್ರೀ ರಾಘವೇಂದ್ರತೀರ್ಥರ ” ಭಾವದೀಪ ” ” ತತ್ತ್ವಪ್ರಕಾಶಿಕಾ ” ದ ಅಭಿಪ್ರಾಯವನ್ನು ತಿಳಿಸುವುದರೊಂದಿಗೆ ಹೊಸದಾದ ಆಕ್ಷೇಪಗಳಿಗೆ ಉತ್ತರವನ್ನೂ ನೀಡುತ್ತದೆ. ಶ್ರೀ ವಿಷಯವನ್ನು ಶ್ರೀ ರಾಯರು….

ನೂತರೈರುದಿತಾ ಯೇತು ದೋಷಾಸ್ತೇಷಾಮಲಗ್ನತಾಮ್ ।
ಸಂಪ್ರದರ್ಶಯಿತುಂ ಚಾತಃ ಪ್ರಸನ್ನಾಃ ಸಂತು ಸಜ್ಜನಾಃ ।।

” ಅಣುಭಾಷ್ಯ ” ಕ್ಕೆ ” ತತ್ತ್ವಮಂಜರೀ “……

ಹಂತಾನಂತೋಣುಭಾಷ್ಯೇ ವಿಲಸತಿ ಭಗವತತ್ ಪಾದ ಸಂವರ್ಣಿತೋsರ್ಥಃ
ಸತ್ಯಂ ಪ್ರತ್ಯೇತು ಲೋಕಃ ಕಥಮಿದಮಧುನಾ ತಸ್ಯ ಟೀಕಾಂ ವಿನಾ ತೇ ।
ಧೀರಶ್ರೀ ರಾಘವೇಂದ್ರ ವ್ರತಿವರ ನಿವಸದ್ ವಿಶ್ವಮಾಸ್ಯಾಂತರಾಲೇ
ಸ್ತೋಕೇ ತೋಕಸ್ಯ ಶೌರೇರತಿಭೃಶಕುಪಿತಾಂ ತತ್ ಪ್ರಸೂಮಂತರೇವ ।।

” ಸೂತ್ರ ಪ್ರಸ್ಥಾನ ” ದ ಮೇಲೆ ಶ್ರೀಮದಾಚಾರ್ಯರ ಕೃತಿ ” ಅಣುಭಾಷ್ಯ “.

” ಸರ್ವ ಶಾಸ್ತ್ರಾರ್ಥ ಸಂಗ್ರಹ ” ಯೆಂಬ ಅನ್ವರ್ಥ ಹೆಸರು ಅದಕ್ಕಿದೆ. ಯಶೋದೆಗೆ ಶ್ರೀ ಕೃಷ್ಣ ಬಾಲ್ಯದಲ್ಲಿ ತನ್ನ ಬಾಯಲ್ಲಿ ಬ್ರಹ್ಮಾಂಡವನ್ನೇ ತೋರಿಸಿದ.

ಅದರಂತೆ ಶ್ರೀಮದಾಚಾರ್ಯರು ಚಿಕ್ಕದಾದ ಈ ಕೃತಿಯಲ್ಲಿ ” ಸಮಸ್ತ ಶಾಸ್ತ್ರಗಳ ಅರ್ಥ ” ವನ್ನು ತೋರಿಸಿದ್ದಾರೆ. ” ಅಣುಭಾಷ್ಯ ” ದಲ್ಲಿ ಅಡಗಿರುವ ಸರಿಯಾದ ಅರ್ಥವನ್ನು ತಿಳಿಯಲು ಶ್ರೀ ರಾಘವೇಂದ್ರತೀರ್ಥರ ” ತತ್ತ್ವಮಂಜರೀ ವ್ಯಾಖ್ಯಾನ ” ದ ಅಗತ್ಯವಿದೆ.

” ತತ್ತ್ವಮಂಜರೀ ಸಹಾಯವಿಲ್ಲದೆ ಅಣುಭಾಷ್ಯದ ಅರ್ಥವನ್ನು ತಿಳಿಯಲು ಅಸಾಧ್ಯ!!!

ರಾಗ : ಹಿಂದೋಳ ತಾಳ : ಆದಿ

ಭೋ ಯತಿವರೇಂದ್ರ ಸದ್ಗುರುರಾಯ ರಾಘವೇಂದ್ರ ।। ಪಲ್ಲವಿ ।।

ಕಾಯೋ ಯೆನ್ನ ಶುಭಕಾಯ ಭಜಿಸುವೆ ।
ಕಾಯೋ ಮಾಯತಮಕೆ ಚಂದ್ರ ।। ಅ. ಪ ।।

ನೇಮವು ಎನಗೆಲ್ಲಿ ಯಿರುವುದು ।
ಕಾಮಧಮನಲ್ಲಿ ।
ಭೋ ಮಹಾ ಮಹಿಮನೆ ಪಾಮರ । ನಾ ।
ನಿಮ್ಮ ನಾಮವೊಂದೆ ಬಲ್ಲೆ ।। ಚರಣ ।।

ಕಂಡ ಕಂಡ ಕಡೆಗೆ ತಿರುಗಿ ।
ಬೆಂಡಾದೆನೊ ಕೊನೆಗೆ ।
ಕಂಡ ಕಂಡವರನು ಕೊಂಡಾಡುತ ನಿಮ್ಮ ।
ಕಂಡೆ ಕಟ್ಟಕಡೆಗೆ ।। ಚರಣ ।।

ಮಂತ್ರವ ನಾನರಿಯೆ । ಶ್ರೀ ।
ಮನ್ಮಂತ್ರಾಲಯ ಧೊರೆಯೆ ।
ಅಂತರಂಗದೊಳು ನಿಂತು ಪ್ರೇರಿಸುವ । ಅ ।
ನಂತಾದ್ರೀಶನ ನಾನರಿಯೆ ।। ಚರಣ ।।

ಭೋ = ಭಲೇ

ಯತಿವರೇಂದ್ರ = ಯತಿ ಶ್ರೇಷ್ಠ

ರಾಯ = ಸಾತ್ವಿಕ ಸಂಪತ್ತನ್ನು ಉಳ್ಳವರು ಮತ್ತು ತಮ್ಮನ್ನು ನಂಬಿ ಬಂದ ಭಕ್ತರಿಗೆ ಸಾತ್ವಿಕ ಸಂಪತ್ತನ್ನು ಕೊಡುವವರು

ಶುಭಕಾಯ = ಸುಂದರವಾದ ಶರೀರ ಉಳ್ಳವರು

ಮಾಯತಮಕೆ = ಕತ್ತಲೆಗೆ

ಚಂದ್ರ = ಬೆಳಕು

 

 

ಸ್ನಾನಕಾಲದಲ್ಲಿ ಸ್ಮರಿಸಬೇಕಾದ ಮೂರ್ತಿಗಳು

ಸ್ನಾನಕಾಲದಲ್ಲಿ ಸ್ಮರಿಸಬೇಕಾದ ಮೂರ್ತಿಗಳು

111.jpg

ಬ್ರಹ್ಮಾಂಡ ಪುರಾಣದಲ್ಲಿ ವಶಿಷ್ಟ ಋಷಿಗಳು ಉಪದೇಶಿಸಿರುವರು

೧. ಗಂಗಾ ನದಿಯಲ್ಲಿ ಶಂಖಚಕ್ರ ಗದಾಪದ್ಮಧಾರಿಯಾದ ಮಾಧವ ದೇವನನ್ನು ಸ್ನಾನಕಾಲದಲ್ಲಿ ಧ್ಯಾನ ಮಾಡಬೇಕು.

೨. ಗೋದಾವರೀ ಮಹಾನದಿಯಲ್ಲಿ ಶಂಖ ಚಕ್ರ ಗದಾ ಪದ್ಮಗಳಿಂದ ಶೋಭಿತನಾದ ವೀರನಾರಾಯಣನನ್ನು ಧ್ಯಾನಿಸಬೇಕು.

೩. ಕೃಷ್ಣವೇಣಿಯಲ್ಲಿ ಸ್ನಾನಮಾಡುವಾಗ ಶಂಖ, ಚಕ್ರ, ಅಸೀ (ಖಡ್ಗ), ಶಾರ್ಙ್ಗ ಧನುರ್ಧಾರಿಯಾಗಿ ಚತುರ್ಬಾಹುವುಳ್ಳ ಮಹಾತೇಜಸ್ವಿಯಾದ (ಜನಾರ್ದನ) ಸಾಕ್ಷಾತ್ ಶ್ರೀ ಕೃಷ್ಣನನ್ನು ಧ್ಯಾನಿಸಬೇಕು.

೪. ಕಾಳಿಂದಿಯಲ್ಲಿ ಯಮಪುತ್ರನೂ, ಸದಾ ದಂಡ, ಗದಾ, ಶಂಖ, ಅಸಿ, ಶಾರ್ಙ್ಗಧನುಸ್ಸನ್ನು ಧರಿಸಿರುವ ಚತುರ್ಬಾಹುವುಳ್ಳ ಕೃಷ್ಣನಾಮಕನಾದ ಶ್ರೀಹರಿಯನ್ನು ಧ್ಯಾನಿಸಬೇಕು.

೫-೮. ಸರಸ್ವತಿಯಲ್ಲಿ ಪದ್ಮನಾಭನನ್ನೂ, ಕಾವೇರಿಯಲ್ಲಿ ರಂಗನಾಥನನ್ನೂ, ಸರಯೂ ನದಿಯಲ್ಲಿ ಶ್ರೀರಾಮನನ್ನೂ, ನರ್ಮದಾ ನದಿಯಲ್ಲಿ ಚತುರ್ಬಾಹುವುಳ್ಳ ಮಹಾವಿಷ್ಣುವನ್ನೂ, ತುಂಗಭದ್ರೆಯಲ್ಲಿ ವರಾಹನನ್ನೂ, ಸಮುದ್ರದಲ್ಲಿ ಕ್ಷೀರಸಾಗರಶಾಯಿಯನ್ನೂ, ಭವನಾಶಿನಿಯಲ್ಲಿ ನೃಸಿಂಹನನ್ನೂ, ಕುಮುದ್ವತಿಯಲ್ಲಿ ತ್ರಿವಿಕ್ರಮನನ್ನೂ, ಮಂಜುಳಾ ನದಿಯಲ್ಲಿ ಹಯಗ್ರೀವನನ್ನೂ, ಭೀಮರಥಿಯಲ್ಲಿ ಶ್ರೀಧರನನ್ನೂ, ತಾಂಮ್ರಪರ್ಣಿಯಲ್ಲಿ ಅನಂತನನ್ನೂ, ಮಲಾಪಹಾರಿಯಲ್ಲಿ ಜನಾರ್ದನನ್ನೂ, ಪಿನಾಕಿನೀ ನದಿಯಲ್ಲಿ ಕೇಶೀನಾಮಕ ರಾಕ್ಷಸನನ್ನು ಸಂಹರಿಸಿದ ಕೇಶವನನ್ನೂ ಧ್ಯಾನಿಸಬೇಕು.

೯-೧೧. ಇವುಗಳಲ್ಲದೇ ಈ ಭೂಲೋಕದಲ್ಲಿ ಪೃಥುಕ್ ಸಾಗರಗಾಮಿಗಳಾದ ಬೇರೆ ಬೇರೆ ನದಿಗಳಲ್ಲಿ ಪದ್ಮ, ಶಂಖ, ಚಕ್ರ, ಗದೆಗಳಿಂದ ಪರಿಶೋಭಿತವಾದ ಕೇಶವಾದಿ ಮೂರ್ತಿಗಳನ್ನೂ ಸಂಸ್ಮರಿಸಬೇಕು.

೧೨-೧೩. ಸರೋವರಗಳಲ್ಲಿ ಸದಾ ದತ್ತಾತ್ರೇಯನನ್ನು ಸ್ಮರಿಸಬೇಕು. ಸ್ವಾಮಿಪುಷ್ಕರಣೀ ತೀರ್ಥದಲ್ಲಿ ಶ್ರೀಭೂದೇವಿಯರಿಂದ ಸಹಿತನಾದ ಸೊಂಟದ ಮೇಲೆ ಎಡಕೈಯನ್ನೂ, ಬಲದ ಕೆಳಗಿನ ಕೈವರಹಸ್ತವನ್ನು ಧರಿಸಿರುವ, ಮೇಲೆ ಇರುವ ಎರಡು ಕೈಗಳಲ್ಲೂ ಶಂಖ ಚಕ್ರವನ್ನು ಧರಿಸಿ “ವಿಭುವೂ, ಪ್ರಸನ್ನ ಮುಖ ಕಮಲವುಳ್ಳವನೂ ಆದ ಅಧೋಕ್ಷಜ (ಶ್ರೀನಿವಾಸ)ನನ್ನೂ” ಸ್ಮರಿಸಬೇಕು.
೧೪. ಚಂದ್ರಪುಷ್ಕರಿಣೀ ಜಲದಲ್ಲಿ ವಾಮನನ್ನೂ, ಮಾನಸ ಸರೋವರದಲ್ಲಿ ಮಧುಸೂದನನನ್ನೂ, ದೇವಖಾತದಲ್ಲಿ ಗದಾಧರನನ್ನೂ ಸ್ಮರಿಸಬೇಕು.

೧೫-೧೬. ಕ್ಷುದ್ರ (ಸಣ್ಣ) ನದಿಗಳಲ್ಲಿ ಲಕ್ಶ್ಮೀನಾರಾಯಣನನ್ನು ಸ್ಮರಿಸುವುದು. ತಟಾಕದ(ಕರೆಯ)ಲ್ಲಿ ಶೇಷಶಾಯಿಯನ್ನೂ, ಭಾವಿಗಳಲ್ಲಿ ಸ್ನಾನಮಾಡುವಾಗ ಮಹಾವಿಭುವಾದ ಚಕ್ರಪಾಣಿಯನ್ನೂ ಧ್ಯಾನಮಾಡಿ ಸ್ಮರಿಸಬೇಕು.

“ಎಲೈ ರಾಜನೇ, ಈ ಪ್ರಕಾರವಾಗಿ ತೀರ್ಥಸ್ನಾನ ಫಲಾಪೇಕ್ಷೆಯುಳ್ಳವರು ಈ ಮೇಲೆ ಹೇಳಿದ ಮತ್ತು ಇತರ ಶ್ರೀ ಹರಿಯ ಮೂರ್ತಿಗಳನ್ನು ವಿಚಾರ ಮಾಡದೆ ಸತತ ಸ್ಮರಿಸುವುದು” ಎಂಬುದಾಗಿ ಬ್ರಹ್ಮಾಂಡ ಪುರಾಣದಲ್ಲಿ ವಶಿಷ್ಟ ಋಷಿಗಳು ಉಪದೇಶಿಸಿರುವರು.

ನದೀ ತಾರತಮ್ಯ ಸ್ತೋತ್ರಮ್

(ಮಂತ್ರಾಲಯ ಗುರುಸಾರ್ವಭೌಮ ಶ್ರೀ ರಾಘವೇಂದ್ರಸ್ವಾಮಿಗಳ ವಿರಚಿತ
ಶ್ರೀ ಬ್ರಹ್ಮಾಂಡ ಪುರಾಣಾಂತರ್ಗತ)

ವಿಷ್ಣುಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ |
ತತೊ ಗೋದಾವರೀ ನ್ಯೂನಾ ಕೃಷ್ಣವೇಣೀ ತತೋಧಮಾ ||೧||

ಸ್ವಾಮಿಚಂದ್ರೌ ಪುಷ್ಕರಿಣ್ಯೌ ಮಾನಸಂ ಚ ಸರೋವರಂ |
ಕೃಷ್ಣವೇಣ್ಯಾಃ ಸಮಾಸ್ತಾಭ್ಯಃ ಕಾವೇರೀ ಚ ಸರಸ್ವತೀ ||೨||

ಹೀನೇಽನ್ಯೋಪಸಮೇತಾಭ್ಯಾಮೂನಾ ಚ ಸರಯೂ ತಥಾ |
ತುಂಗಭದ್ರಾ ಸಮಾ ತಸ್ಯಾಃ ಕಾಳಂದ್ಯೂನಾ ತತೋಧಮಾ ||೩||

ನರ್ಮದಾ ಸಿಂಧುಸರಿತೌ ತತ್ಸಮಾ ಭವನಾಶಿನೀ |
ತತಃ ಕುಮುದ್ವತೀ ನೀಚಾ ತತೋ ನೀಚಾ ಮಲಾಪಹಾ ||೪||

ತಾಮ್ರಪರ್ಣೀ ಭೀಮರಥೀ ಮಂಜುಲಾ ಚ ಪಿನಾಕಿನೀ |
ಪೃಥಕ್ ಸಾಗರಗಾಮಿನ್ಯೋ ನದ್ಯೋ ಭೀಮರಥೀಸಮಾಃ ||೫||

ತತೋ ಸ್ಯಾಸರಿತೋನೀಚಾಸ್ತಟಾಕಾಶ್ಚ ತತೋಧಮಾಃ |
ತತೋ ವಾಪ್ಯಾಧಮಾಸ್ತಾಭ್ಯಃ ಕೂಪಾಃ ಸರ್ವಾಧಮಾ ಮತಾಃ ||೬||

ಸ್ವೋತ್ತಮಾರ್ಘ್ಯಪ್ರದಾತವ್ಯಮವರಾಸು ನ ಚಾನ್ಯಥಾ
ರಾಘವೇಂದ್ರೇಣ ಯತಿನಾ ಬ್ರಹ್ಮಾಂಡಾಖ್ಯಪುರಾಣಗಃ
ಇತ್ಯುದ್ಧೃತಃ ಸಾರಭಾಗೋ ನದೀ ನೀಚೊಚ್ಚ ಸೂಚಕಃ ||

ಇತಿ ಶೀರಾಘವೇಂದ್ರಯತಿಕೃತ ನದೀ ತಾರತಮ್ಯ ಸ್ತೋತ್ರಮ್…

।। ಶ್ರೀ ಕೃಷ್ಣಾರ್ಪಣಮಸ್ತು ।।

Sripadarajaru

Sripadarajaru – An incarnation of Dhruva

Sripadarajaru is revered by all madhvas. It is believed that he is the incarnation of Dhruva. His contributions to Dvaita, Haridasa Sahitya, and the then existing Social and Political circumstances were considerable. He was also the Vidyaguru of Sri Vyasarayaru.

Sripadarayaru or Sripadarajaru is considered to be the originator of dasakuta. That is why his name stands first in the following stotra which is sung at the beginning of any traditional Harikatha discourse

“namah sripadarajaya namaste vyasa yogine namah purandararyaya vijayaryaya te namaha”

That is why he is also called as ‘Dasa Pitamaha’ (Grand Father of Dasas). He spread the message of Bhagawatha through his songs.

Sripadarajaru was born in Shivaganga on the banks of the river Kaveri. His parents named him Lakshminarayana.

Sri Svarnavarnaru Theertharu was the 8th pontiff descended from Padmanabha Theeirtharu (a direct disciple of Madhvacharya). He was once travelling towards Abburu when he came across Lakshminarayana playing with this friends. When asked how far Abburu was, the little boy gave a very clever reply. He said, “Look at the setting sun, and look at us playing here. Now you guess how far Abburu is! ” (the intended meaning was “we are playing here even though the sun is setting because we are confident of reaching home before it gets really dark; in other words, Abburu is close by!”). The Swamiji was taken back by the boy’s keen intellect and decided to make him disciple. Later, after obtaining his parent’s consent, the boy was granted sanyashrama and named Lakshminarayana Yogi.

The name SrIpadarajaru was given to him by Sri Raghunatha Theertharu of Uttaradi Mutt. There are 2 versions about why he did so; one version goes that he was impressed by young Lakshminarayana Yogi’s vidvat, whereas another goes that he personally witnessed the revival of a dead boy by Lakshminarayana Yogi. In any case, from then on Lakshminarayana Yogi became Sripadarajaru. (In Kannada, a swamiji is called “Sripadangalu” or “Srigalu”, so Sripadarajaru literally means the king of Sanyasis).

Sripadarajaru had “Sukha Prarabdha” i.e., he was destined to live like a king even though he was a saint. Needless to add, he was at heart a total ascetic whose mind was pegged at the lotus feet of Gopalakrishna, but his prarabdha forced him to enjoy Rajavaibhoga.

According to a tradition, recorded in the Sri Brahmanya Theertha Vijaya, Sri Brahmanya Theertharu and Sripadarajaru were cousins and were roughly of the same age. It is remarkable that both renounced the world and devoted themselves to the cause of their faith and played a conspicuous part in the spiritual development of their gifted disciple Sri Vyaasa Theertharu.

Sripadarajaru earned great fame by removing Vijayanagara King’s Brahmahatya Dosha (the sin of killing Brahmins) which is considered to be the most heinous of all sins.

He was a great scholar and poet. He started the practice of singing kannada Devaranamas, steeped in Bhakthi, at the end of all main pooja ceremonies.

His songs are very sublime and possess a happy blend of rhythm and meaning. His sincerity and passionate devotion are transparent in his songs. It is believed that the lord used to dance to his songs.

His compositions show a high order of musical excellence and literary grace. The personal element in his songs is most touching. In true mystic grammar, he analyses the defects and mental agonies of man and lays them bare before the Lord, praying for light and vision, impersonally, on behalf of struggling souls.

His important pieces are the Bhramaragita, Venugita, Gopigita, and Madhvanama (which extols Hanuma, Bhima, Madhva; the Phalasthuthi for this was composed by Jagannatha Dasaru).

Some of his famous Devaranamas are: “Ne Ittahange Iruveno Hariye”, “Kangalidyathako Kaveri Rangana Nodada..”, “Bhushanake Bhushana …”. His Ankithanama was “Ranga Vittala”.

Sripadarajaru has his Brindavana at a place called Narasimha Thirtha, about a mile from Mulabagilu, on the Bangalore and Chennai National Highway. There is an interesting anecdote about Narasimha Thirtha which goes as follows:

It is said that when he was at his old age, he wanted to have Ganga-Snana, but could not travel all the way up North. Ganga then appeared before him and said that she herself would come to Narasimha Thirtha and stay there for ever. From then on, a dip in Narasimha Thirtha is considered to be equivalent to a dip in Ganga.

The following stotra in honor of Sripadaraja was composed by Vyasaraya

Tham vande Narasimha Thirtha nilayam Sri Vyaasaraja Poojitham
Dhayantham manasa nrusimha charanam Sripadarajaram gurum.
Pada Vakya Pramatabhyam Vikreedana Visharadam
LakshmiNarayana Muneem Vande Vidya Gurunmam