ನರಸಿಂಹ ಮಂತ್ರವು ಒಂದಿರಲು ಸಾಕು

ನರಸಿಂಹ ಮಂತ್ರವು ಒಂದಿರಲು ಸಾಕು

ನರಸಿಂಹ ಮಂತ್ರವು ಒಂದಿರಲು ಸಾಕು
ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ ||

ಶಿಶುವಾದ ಪ್ರಲ್ಹಾದನ ಬಾಧೆ ಬಿಡಿಸಿದ ಮಂತ್ರ
ಅಸುರಕುಲದವರಿಗೆ ಶತ್ರು ಮಂತ್ರ
ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ
ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ (1)

ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ
ಶಿಷ್ಟ ವಿಭೀಷಣನ ಪೊರೆದ ಮಂತ್ರ
ಕಟ್ಟ ಕಡೆಯಲಿ ಅಜಾಮಿಳನ ಸಲಹಿದ ಮಂತ್ರ
ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ (2)

ಹಿಂಡುಭೂತನ ಕಡಿದು ತುಂಡು ಮಾಡುವ ಮಂತ್ರ
ಕೊಂಡಾಡೋ ಲೋಕಕೆ ಪ್ರಪಂಚ ಮಂತ್ರ
ಗಂಡು ಗಲಿ ಕದನ ಉದ್ದಂಡ ವಿಕ್ರಮ ಮಂತ್ರ
ಪುಂಡರೀಕಾಕ್ಷ ಪುರಂದರ ವಿಠಲ ಮಂತ್ರ (3)

ಅನ್ಯ ಸತಿಯರೊಲುಮೆ

ಅನ್ಯ ಸತಿಯರೊಲುಮೆ

purandara

ಅನ್ಯ ಸತಿಯರೊಲುಮೆ ಗೊಲಿದು ಅಧಮಗತಿಗೆ ಬೀಳಲೇಕೆ l
ತನ್ನ ಸತಿಯರೊಲುಮೆ ಗೊಲಿದು ತಾನು ಸುಖಿಸಬಾರದೆ ll
ಮಿಂದು ಮಲವನ್ನ ಬಿಡಿಸಿ ಮೇಲು ವಸ್ತ್ರವ ತೊಡಿಸಿl
ಅಂದವಾದ ಆಭರಣವಿತ್ತು ಅರ್ತಿಯಿಂದ ನೋಡುತl
ಗಂಧ ಕಸ್ತೂರಿ ಪುನುಗು ಪೂಸಿ ಗಮಕದಿಂದ ಹೂವ ಮುಡಿಸಿl
ಸಂಕ್ಷಮದಿ ಸಂತೋಷ ಪಡುವ ಸುಖವು ತನಗೆ ಸಾಲದೆll
ಪೊಂಬಣ್ಣ ಎಸೆವ ಮೈಯದರೊಳು ಒಲಿವ ಕುಚಕ್ಕೆ ಕೈಯನಿಟ್ಟುl
ಕಂಬುಕಂದರವ ನೋಡಿ ಕಸ್ತೂರಿನಿಟ್ಟು ಮುಟ್ಟಿಸುತl
ಹಂಬಲಿಸಿ ಸತಿಯ ನೋಡಿ ಹಲವು ಬಂಧನದಿಂದ ಕೂಡಿl
ಸಂಕ್ಷಮದಿ ಸಂತೋಷ ಪಡುವ ಸುಖವು ತನಗೆ ಸಾಲದೆll
ಸತಿಪತಿಯು ಏಕವಾಗಿ ಸರ್ವಜನರ ಹಿತವ ಚಿಂತಿಸಿl
ಅತಿಥಿಯನ್ನ ಪೂಜೆಮಾಡಿ ಒಂದೆನ್ನಿಸಿಕೊಲ್ಲುತl
ಕ್ಷಿತಿಯೊಳಧಿಕ ಗುರು ಪುರಂದರವಿಠಲನ್ನ ಪಾದವನು ಸ್ಮರಿಸಿl
ಸತಿಸುತರು ಹಿತರು ನೀವು ಸುಖದಿಂದ ಆಳಿರೋll

ತೊರೆದು ಜೀವಿಸಬಹುದೆ

ತೊರೆದು ಜೀವಿಸಬಹುದೆ 

download (3)

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಕರಪಿಡಿದೆನನ್ನು ಕಾಯಿ ಕರುಣಾನಿಧೆ

ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲುಬಹುದು
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯಜ ಪಿತ ನಿನ್ನಡಿಯ ಬಿಡಲಾಗದು

ಒಡಲು ಹಸಿದರೆ ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ
ಬಿಡಬಹುದು
ಕಡಲೊಡೆಯ ನಿನ್ನಡಿಯ ಘಳಿಗೆ
ಬಿಡಲಾಗದು

ಪ್ರಾಣವನ್ನು ಪರರಿಗೆ ಬೇಡಿದರೆ
ಕೊಡಬಹುದು
ಮಾನಾಭಿಮಾನವ
ತಗ್ಗಿಸಿಬಹುದು
ಪ್ರಾಣದಾಯಕನಾದ ಆದಿಕೇಶವರಾಯ ಜಾಣ ಶ್ರೀಕೃಷ್ಣ
ನಿನ್ನಡಿಯ ಬಿಡಲಾಗದು

ತಮ್ಮಾ ನೀ ನೋಡಿದ್ಯಾ ಒಮ್ಮನದಿಂದ

ತಮ್ಮಾ ನೀ ನೋಡಿದ್ಯಾ ಒಮ್ಮನದಿಂದ

venkata02

ತಮ್ಮಾ ನೀ ನೋಡಿದ್ಯಾ ಒಮ್ಮನದಿಂದ
ಬೊಮ್ಮ ಮೂರುತಿ ಶ್ರೀವಲ್ಲಭರಂಗನಾ

ಹಿಂಡು ದೈವರ ಗಂಡ ಚಂಡ ವಿಕ್ರಮ ನಮ್ಮ
ಕೊಂಡಜ್ಜಿ ಬಳಿಲಿರುವ ಪುಂಡರಿಕಾಕ್ಷನ

ನೂಪುರ ಗೆಜ್ಜೆ ಪೆಂಡ್ಯ ಆಪಾದ ಸೊಬಗಿಂದ
ಶ್ರೀಪತಿ ಮೆರೆಯುವ ಭೂಪತಿ ವರದನ

ಇಕ್ಷುಚಾಪನ ಪಿತನ ಅಕ್ಷಯ ಫಲದವನ
ವಕ್ಷದೋಳ್ ಧರಿಸಿಹ ಲಕ್ಷ್ಮಿಉಳ್ಳವನ

ಕೊರಳಲ್ಲಿ ಕೌಸ್ತುಭ ಕರ್ಣದಿ ಕುಂಡಲ
ಶಿರದಲ್ಲಿ ಕಿರೀಟ ಧರಿಸಿ ಮೆರೆವವನ

ಪವನಾಂತರಂಗನ ಪಾವನ ಚರಿತನ
ಭುವನ ಮೋಹನ ಗುರುಗೋವಿಂದವಿಠಲನ

ಇಂಥ ಪ್ರಭುವ ಕಾಣೆನೋ ಈ ಜಗದೊಳಗಿಂಥ ಪ್ರಭುವ ಕಾಣೆನೋ

ಇಂಥ ಪ್ರಭುವ ಕಾಣೆನೋ ಈ ಜಗದೊಳಗಿಂಥ ಪ್ರಭುವ ಕಾಣೆನೋ

download (3)

|| ಇಂಥ ಪ್ರಭುವ ಕಾಣೆನೋ ಈ ಜಗದೊಳಗಿಂಥ ಪ್ರಭುವ ಕಾಣೆನೋ||ಪ||

||ಇಂಥ ಪ್ರಭುವ ಕಾಣೆ ಶಾಂತ ಮೂರುತಿ ಜಗದಂತ ರಂಗನು
ಲಕ್ಷ್ಮಿ ಕಾಂತ ಸರ್ವಂತರ್ಯಾಮಿ|| ಅ ಪ||

||ಬೇಡಿದ ವರ ಕೊಡುವ ಭಕ್ತರ ತಪ್ಪು ನೋಡದೆ ಬಂದು ಪೊರೆವ
ಗಾಡಿಕಾರನು ಗರುಡಾರೂಢ ಗುಣವಂತ ಮಹ ಪ್ರೌಢ ಪ್ರತಾಪ ಜಗದಿ ಗೂಢದಿಂ ಸಂಚರಿಪ|
ಹಾಡಿ ಪೊಗಳಿ ಕೊಂಡಾಡುವವರ ಮುಂದಾದುತಲಿರ್ಪನು ಕಾಡೊಳಗಿದ್ದರು
ಕೇಡಿಗನೆ ನಾಡಾದಿಗಳಂದದಿ ಈಡುಂಟೇನೋ ಈ ವೇಂಕಟನಿಗೆ||

|| ಭಾರ್ಗವಿ ಭುವಿ ವಲ್ಲಭ ಭವದೂರ ಭಕ್ತ ವರ್ಗಕೆ ಸುಲಭ
ನಿರ್ಗುಣ ನಿರ್ವಿಕಾರ ಸ್ವರ್ಗದೈಶ್ವರ್ಯ ಕಿಂತಾನರ್ಗ ಸಂಪದವೀವ ಧೀರ್ಘಾಯುವಂತನಾದ|
ಭಾರ್ಗವರಾಮ ನೃಪಾರ್ಗಳನೆಲ್ಲ ರಣಾರ್ಗದಿ ಜಯಿಸಿದ ಉಗ್ರಪ್ರತಾಪಿ
ಸುರಾಗ್ರಗಣ್ಯ ಸದ್ವಿಗ್ರಹ ಶ್ರೀಮದನುಗ್ರಹಮಾಣ್ಯನ ದುರ್ಗವ ಕಡಿವ||

|| ಸರಸೀಜಾಸನ ಮನ್ಮಥ ಈರ್ವರು ಸುತರು ಸುರತರಂಗಿಣಿ ತನುಜೆ
ಪುರವೇ ವೈಕುಂಟ ಇಂದ್ರಾಧ್ಯಮರರೇ ಕಿಂಕರರು
ಗರುಡನೆ ತುರಗ ಉರಗ ಪರಿಯಂತ ನಿಷ್ಕಳಂಕ|
ಸರಿದೊರೆಗಳನಾನರಿಯೆನು ವೇಂಕಟ ಗಿರಿಯಲಿ ಮೆರೆಯುವ ಕರುಣಿಗಳರಸನೆ
ಮರೆಯದೆ ಸಲಹುವ ಶರಣಾಗತರನು ಮರುತಾಂತರ್ಗತ ವಿಜಯವಿಠಲ||

ಇದೇ ಪಾಲಿಸು ಇದೇ ಪಾಲಿಸು ಇದೇ ಪಾಲಿಸಯ್ಯ

ಇದೇ ಪಾಲಿಸು ಇದೇ ಪಾಲಿಸು ಇದೇ ಪಾಲಿಸಯ್ಯ

download (1)

ಇದೇ ಪಾಲಿಸು ಇದೇ ಪಾಲಿಸು ಇದೇ ಪಾಲಿಸಯ್ಯ|

ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು||

ಜೀವ ಅಸ್ವಾತಂತ್ರ್ಯ ದೇವ ನಿಜ ಸ್ವಾತಂತ್ರ್ಯ

ಜೀವ ಜಡರೆಲ್ಲ ದೇವರಾಧೀನವೆಂದು|

ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ

ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ||

ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದು

ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ|

ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು

ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ||

ಬಂಧನಾ ನಿವೃತ್ತಿಯು ಎಂದಿಗೋ ಎನಗೆಂದು

ಸಂದೇಹದಿಂದ ನಾ ಕೇಳಲಿಲ್ಲ|

ಸುಂದರಮೂರುತಿ ಗೋಪಾಲವಿಠ್ಠಲ

ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ||

ಈತನೆ ಲೋಕಗುರು ವೇದವಿಖ್ಯಾತ

ಈತನೆ ಲೋಕಗುರು ವೇದವಿಖ್ಯಾತ

ಈತನೆ ಲೋಕಗುರು ವೇದವಿಖ್ಯಾತ || ಪ ||

ಭೂತಳದಿ ಶ್ರೀರಾಮ ದೂತನೆಂಬಾತ || ಅಪ ||

ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನು

ಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದ

ಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತು

ಬಂದು ರಾಮರ ಪಾದಕೆರಗಿ ನಿಂದಾತ || ೧ ||

ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನ

ಲಜ್ಜೆಯನೆ ಕೆಡಿಸಿ ಶದ್ರಥಿಕರನು ಗೆಲಿದ

ಮೂಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದ

ಸಜ್ಜನ ಪ್ರಿಯ ಭೀಮಸೇನ ನೆಂಬಾತ || ೨ ||

ಮೂರಾರು ಎರಡೊಂದು ಮೂಢಮತಗಳ ಜರಿದು

ಸಾರ ಮಧ್ವ ಶಾಸ್ತ್ರವನು ಸಜ್ಜನರಿಗೆರೆದು

ಕೂರ್ಮ ಶ್ರೀಹಯವದನನ ಪೂರ್ಣ ಸೇವಕನಾದ

ಧೀರ ಮಧ್ವಾಚಾರ್ಯ ಲೋಕದೊಳು ಮೆರೆದ || ೩ ||

ಶ್ರೀ ಮಹಾಲಕ್ಷ್ಮಿಯ

ಶ್ರೀ ಮಹಾಲಕ್ಷ್ಮಿಯ

ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು ||

ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ
ನಾರಾಯಣ ನಿಮ್ಮ ನಾಮ ತಾಳಿ ಪದಕವು
ಮಾಧ್ವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು
ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧||

ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು
ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು
ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು
ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨||

ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ
ಹೃಷಿಕೇಶ ನಿಮ್ಮ ನಾಮ ಕಡಗ ಗೆಜ್ಜೆಯು
ಪದ್ಮನಾಭ ನಿಮ್ಮ ನಾಮ ಮುತ್ತಿನಡ್ಡಿಕೆಯು
ದಾಮೋದರ ನಿಮ್ಮ ನಾಮ ರತ್ನದ ಪದಕವು ||೩||

ಸಂಕರ್ಷಣ ನಿಮ್ಮ ನಾಮ ವಂಕಿ ತೋಳಾಯಿತು
ವಾಸುದೇವ ನಿಮ್ಮ ನಾಮ ಒಲಿದ ತೋಡೆ
ಪ್ರದ್ಯುಮ್ನ ನಿಮ್ಮ ನಾಮ ಹಸ್ತಕಂಕಣ ಬಳೆ
ಅನಿರುದ್ಧ ನಿಮ್ಮ ನಾಮ ಮುಕುರ ಬುಲಾಕು ||೪||

ಪುರುಷೋತ್ತಮ ನಿಮ್ಮ ನಾಮ ಹೊಸ ಮುತ್ತಿನ ಮೂಗುತಿ
ಅಧೋಕ್ಷಜ ನಿಮ್ಮ ನಾಮ ಚಂದ್ರ ಸೂರ್ಯ
ನಾರಸಿಂಹ ನಿಮ್ಮ ನಾಮ ಚೌರಿ ರಾಗಟಿ ಗೊಂಡ್ಯ
ಅಚ್ಯುತ ನಿಮ್ಮ ನಾಮ ಮುತ್ತಿನ ಬೊಟ್ಟು ||೫||

ಜನಾರ್ದನ ನಿಮ್ಮ ನಾಮ ಜರಿಯ ಪೀತಾಂಬರ
ಉಪೇಂದ್ರ ನಿಮ್ಮ ನಾಮ ಕಡಗ ಗೆಜ್ಜೆಯು
ಶ್ರೀಹರಿ ನಿಮ್ಮ ನಾಮ ಕಂಚು ಅಂಕಿಯ ತುಳಸಿ
ಶ್ರೀಕೃಷ್ಣ ನಿಮ್ಮ ನಾಮ ನಡುವಿನೊಡ್ಯಾಣವು ||೬||

ಸರಸಿಜಾಕ್ಷ ನಿಮ್ಮ ನಾಮ ಅರಸಿನ ಎಣ್ಣೆ ಹಚ್ಚಿ
ಪಂಕಜಾಕ್ಷ ನಿಮ್ಮ ನಾಮ ಕುಂಕುಮ ಕಾಡಿಗೆಯು
ಪುರಂದರ ವಿಠಲ ನಿಮ್ಮ ನಾಮ ಸರ್ವಾಭರಣವು
ನಿಲುವುಗನ್ನಡಿಯಲಿ ಲಲನೆಯ ತೋರಿಸುತ ||೭

ಏನು ಮಾಡಲೊ ಮಗನೆ

ಏನು ಮಾಡಲೊ ಮಗನೆ

ಏನು ಮಾಡಲೊ ಮಗನೆ ಯಾಕೆ ಬೆಳಗಾಯಿತೊ
ಏನು ಮಾಡಲೊ ಕೃಷ್ಣಯ್ಯ ||ಪ.||
ಏನು ಮಾಡಲಿ ಇನ್ನು ಮಾನಿನಿಯರು ಎನ್ನ
ಮಾನವ ಕಳೆಯುವರೊ ರಂಗಯ್ಯ ||ಅ.ಪ.||

ಹಾಲು ಮೊಸರು ಬೆಣ್ಣೆ ಕದ್ದನೆಂಬುವರೊ
ಮೇಲಿನ ಕೆನೆಗಳ ಮೆದ್ದನೆಂಬುವರೊ
ಬಾಲಕರೆಲ್ಲರ ಬಡಿದನೆಂಬರೊ ಎಂಥ
ಕಾಳ ಹೆಂಗಸು ಇವನ ಹಡೆದಳೆಂಬುವರೊ ||೧||

ಕಟ್ಟಿದ್ದ ಕರುಗಳ ಬಿಟ್ಟನೆಂತೆಂಬರೊ
ಮೆಟ್ಟಿ ಸರ್ಪನ ಮೇಲೆ ಕುಣಿದನೆಂಬುವರೊ
ಪುಟ್ಟ ಬಾಲೆಯರ ಮೋಹಿಸಿದನೆಂಬರೊ ಎಂಥ
ದುಷ್ಟ ಹೆಂಗಸು ಇವನ ಹಡೆದಳೆಂಬುವರೊ ||೨||

ಗಂಗಾಜನಕ ನಿನ್ನ ಜಾರನೆಂತೆಂಬರೊ
ಶೃಂಗಾರಮುಖ ನಿನ್ನ ಬರಿದೆ ದೂರುವರೊ
ಮಂಗಳಮಹಿಮ ಶ್ರೀ ಪುರಂದರವಿಠ್ಠಲ
ಹಿಂಗದೆ ಎಮ್ಮನು ಸಲಹೆಂತೆಂಬರೊ ||೩||

ಪಿಳ್ಳಂಗೋವಿಯ ಚೆಲುವ ಕೃಷ್ಣನ

ಪಿಳ್ಳಂಗೋವಿಯ ಚೆಲುವ ಕೃಷ್ಣನ

download (1)

ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ II
ಎಲ್ಲಿ ನೋಡಿದರಲ್ಲಿ ತನಿಲ್ಲದಿಲ್ಲವೆಂದು ಬಲ್ಲ ಜಾಣರು II
ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪಬಾಲರ ವೃಂದ್ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ II
ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ II
ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠಲನ ಲೋಚನಾಗ್ರದಲಿ II

II हरि सर्वोत्तम वायु जीवोत्तम II