ಮನ್ಯುಸೂಕ್ತಾರ್ಥ(ನರಸಿಂಹದೇವರ )

ಐದನೇಯ ಋಕ್ಕ :-:
ತಾತ್ಪರ್ಯ:-:

ಎಲೈ ನರಸಿಂಹದೇವನೇ,ನೀನು ಅತಿಶಯವಾದ ಬಲ ಮತ್ತು ಅಭಿವೃದ್ದಿಗಳನ್ನು ಹೊಂದಿದ್ದೀ ಅಂತಹ ನಿನಗೆ ನಾನು ಅಪಚಾರ ವನ್ನು ಮಾಡಿದೆನು‌‌.ನಿನ್ನ ಸರ್ವೋತ್ತಮಮತ್ವ ಮತ್ತು ಸರ್ವಗುಣ ಪೂರ್ವತ್ವಗಳನ್ನು ತಿಳಿಯದೇ ದೌರ್ಭಗ್ಯಶಾಲಿಯಾದೆನು.ಅದರಿಂದಲೇ ನನ್ನ ಯೋಗ್ಯತಾನುಸಾರವಾಗಿ ಬರಬೇಕಾದ ಯಾವ ಸಂಪತ್ತು ನನಗೆ ಬರಲಿಲ್ಲ ,ನಾನು ಈಗ ಮೃತಪ್ರಾಯನಾಗಿದ್ದೇನೆ ನಿನ್ನ ಜ್ಞಾನ ಮತ್ತು ಸ್ವರೂಪಾತ್ಮಕವೇ ಆಗಿರುವ ಮನಸ್ಸು ಉತ್ಕೃಷ್ಟ ವಾಗವೆ. ಅವಕ್ಕೆ ಸಮನಾದುದು ಮತ್ತಾವದೂ ಇಲ್ಲ.ಇಂತಹ ಮಹಾಮಹಿಮಾಶಾಲಿಯಾದ ನಿನ್ನನ್ನು ಪೂಜಿಸದೇ, ನಿನ್ನ ಜ್ಞಾನ ವನ್ನು ಪಡೆಯದೇ ನಾನು ನಿನ್ನನ್ನು ಬಿಟ್ಟೆನು ಸ್ವಾಮಿಯೇ ನಾನು ನಿನ್ನ ಶರೀರರೂಪವನು, ನಿನ್ನ ದಾಸನು, ನಿನ್ನಿಂದ ನಿಯಮಿಸಲ್ಪಡುವವನು‌ ದಾಸನಾದ ನನ್ನಲ್ಲಿ ಉತ್ತಮ ಬಲವನ್ನು ಉಂಟುಮಾಡಲು, ಯಾವಾಗಲೂ ನನ್ನಲ್ಲಿ ನಿನ್ನ ಸನ್ನಿಧಾನವನ್ನು ಇಡು ||೫||

ಆರನೇಯ ಋಕ್ಕ:-:
ತಾತ್ಪರ್ಯ:-:

ಎಲೈ ಮನ್ಯುನಾಮಕನಾದ ನರಸಿಂಹನೇ,ನೀನು ಹುರ್ ಎಂದು ಶತ್ರು ಭಯಂಕರವಾದ ಶಬ್ಧವನ್ನು ಮಾಡುತ್ತೀ ನೀನು ವಜ್ರಾಯುಧಧಾರಿಯಾಗಿದ್ದೀ ,ಭಕ್ತರ ಎಲ್ಲಾ ಪಾಪವನ್ನು ಪರಿಹಾರ ಮಾಡುತ್ತೀ .ನಾನು ನಿನ್ನವನು ನಿನ್ನ ಭಕ್ತನು, ನೀನು ಭಕ್ತನಾದ ನನ್ನ ಬಳಿಗೆ ಬೇಗನೇ ಬಾ ಸೃಷ್ಟಿಗಿಂತ ಮೊದಲು ಸೃಷ್ಟಿಯ ಅನಂತರದಲ್ಲಿಯೂ ,ಹಿಂದೆಯೂ ,ಮುಂದೆಯೂ ಸಮಸ್ತ ಪ್ರಪಂಚಧಾರಕನು ನೀನೆ ಆಗಿದ್ದೀ ಆದುದರಿಂದ ಸಮಸ್ತ ಪ್ರಪಂಚವನ್ನು ಆವರಿಸಿರುವ ನೀನು ನನ್ನನ್ನು ಸರ್ವದಿಕ್ಕುಗಳಲ್ಲಿ ಆವರಿಸಿ ಕಾಪಾಡು ,ನನ್ನನ್ನು ನಿನ್ನ ಭಕ್ತನನ್ನಾಗಿ ಸ್ವೀಕರಿಸು, ನಿನ್ನ ಅನುಗ್ರಹವಿಲ್ಲದೇ ನಾನು ನಿನ್ನನ್ನು ಸ್ವಪ್ರಯತ್ನದಿಂದ ನೋಡಲಾರೆ ,ಪಡೆಯಲಾರೆ, ನೀನು ಅನುಗ್ರಹಿಸಿದಾಗ ಮಾತ್ರ ನಿನ್ನೊಡನೆ ಸೇರಿ ಶತ್ರುಗಳನ್ನು ಸಂಹರಿಸಲು ಸಾಧ್ಯವಾಗುತ್ತದೆ.ನನಗೆ ಯಾವಾಗ ಶತ್ರುಗಳು ಬಂದು ತೊಂದರೆ ಕೊಡಬಹುದೆಂದು ನೀನೆ ತಿಳಿಸಿ, ಶತ್ರುಗಳ ಸಂಹಾರಕ್ಕೆ ನೀನೆ ಸಹಾಯ ಮಾಡಬೇಕು .||೬||

ಏಳನೇಯ ಋಕ್ಕ:-:
ತಾತ್ಪರ್ಯ :-:

ಎಲೈ ಮನ್ಯುನಾಮಕನಾದ ಲಕ್ಷ್ಮೀನರಸಿಂಹನೇ! ನೀನು ನನ್ನ ಬಲದಲ್ಲಿರು, ನನಗೆ ಸಹಾಯಕನಾಗು ಈ ಹಿಂದೆಯೂ ನೀನು ನನಗೆ ಬಲವನ್ನು ಕೊಟ್ಟಿದ್ದೆ, ಮುಂದೆಯೂ, ನನಗೆ ಬಲಪ್ರದನಾಗು .ಅನಂತರ ನಾನು ಮಧುರ ರಸೋಪೇತವಾದ ಸೋಮರಸ ಮುಂತಾದವುಗಳನ್ನು ಮೊದಲೇ ಅರ್ಪಿಸುತ್ತೆನೆ. ನಿನಗೆ ಅರ್ಪಿಸಿದ ನಂತರ ಉಳಿದ ಹೋಮಶೇಷವನ್ನು ಮೊದಲಾಗಿ ನಾವಿಬ್ಬರೂ ಪಾನ ಮಾಡೋಣ ,ನೀನು ಉತ್ತಮ ರಸವನ್ನು ಸ್ವೀಕಾರ ಮಾಡಿದ ಮೇಲೆ ನಿನ್ನ ಪ್ರಸಾದವನ್ನು ನಾನು ಸ್ವೀಕರಿಸುತ್ತೆನೆ.ಹೀಗೆ ಉತ್ತಮವಾದ ಸಾರರಸವನ್ನು ಸ್ವೀಕರಿಸಿ ನಾವಿಬ್ಬರೂ ಪಾಪಗಳನ್ನು ಆ ಪಾಪಾಭಿಮಾನಿ ಶತ್ರುಗಳನ್ನೂ ಪುನಃ ಪುನಃ ಸಂಹರಿಸೋಣ .ನಿನ್ನ ಸಹಾಯದಿಂದ ನನಗೆ ಪಾಪಗಳನ್ನೂ, ಶತ್ರುಗಳನ್ನೂ, ಗೆಲ್ಲುವ ಶಕ್ತಿಯು ಪ್ರಾಪ್ತವಾಗಲಿ ಎಂದು ಪ್ರಾರ್ಥಿಸುತ್ತೇನೆ. ||೭||

ಶ್ರೀ ಮಧ್ವೇಶಾರ್ಪಣಮಸ್ತು

ಶ್ರೀ ಕೃಷ್ಣಾರ್ಪಣಮಸ್ತು