ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು

Veda-Vyasa-Devaru-Acharya-Madhwa

ಶಾಸ್ತ್ರೋಕ್ತವಾದ ಸಂನ್ಯಾಸ ವಿಧಿ ವಿಧಾನಗಳು :-

( ಸಂನ್ಯಾಸ ವಿಧಿ ವಿಧಾನಗಳು 3 ದಿನಗಳ ಪ್ರಕ್ರಿಯೆ )

ಅ) ಸಂನ್ಯಾಸ ಸ್ವೀಕಾರ ಮಾಡುವುದಕ್ಕೆ ಪೂರ್ವದಲ್ಲಿ ಸಜ್ಜನರ ಸಮಕ್ಷಮದಲ್ಲಿ ಗುರುಗಳು ಶಿಷ್ಯ ಸ್ವೀಕಾರ ಮಾಡುತ್ತಿದ್ದೇನೆಂದು ಫಲ ಮಂತ್ರಾಕ್ಷತೆ ಪಡೆಯಲೇಬೇಕು.

ಆ ) ಫಲ ಮಂತ್ರಾಕ್ಷತೆ ಸ್ವೀಕಾರ ಮಾಡಿದ ವ್ಯಕ್ತಿ ಆದಿನ ಉಪವಾಸದಿಂದ ಇರಬೇಕು.

ಇ) ಮರುದಿನ ಬೆಳಗ್ಗೆ ಪಿಂಡಪ್ರಧಾನ ಮಾಡಿ ತನ್ನ ಪಿತೃಗಳಿಗೆ ಸಂಬಂಧಪಟ್ಟ ಶ್ರಾದ್ಧಾದಿಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ತನ್ನ ಮಗನಿಗೆ ಕೊಟ್ಟು ಇನ್ನುಮುಂದೆ ನನಗೂ – ಇವರಿಗೂ ಯಾವ ಸಂಬಂಧ ಇಲ್ಲವೆಂದು ಹೇಳಿ ಆ ಪಿಂಡವನ್ನು ತಮ್ಮ ಮಗನಿಗೆ ಒಪ್ಪಿಸುತ್ತಾರೆ. ಅದರಂತೆ ಅವರು ನಡೆಸಿಕೊಂಡು ಹೋಗುತ್ತಾರೆ. ಇಲ್ಲಿಗೆ ಪ್ರಾಪಂಚಿಕ ಸಂಬಂಧಗಳು ಕಡೆದು ಹೋಗುತ್ತದೆ!!

ಈ) ಕ್ಷೌರ ನಂತರ ಜೀವತ್ ಶ್ರಾದ್ಧ ” ಆತ್ಮಶ್ರಾದ್ಧ ” ಮಾಡಿಕೊಳ್ಳುತ್ತಾರೆ. ಆದಿನ ಅವರನ್ನು ಯಾರೂ ನೋಡಕೂಡದು. ಕಾರಣ ಅವರು ಒಂದುರೀತಿ ಪ್ರೇತಯಿದ್ದಂತೆ. ಆದಿನವೂ ಉಪವಾಸದಿಂದ ಇರಲೇಬೇಕು ಮತ್ತು ಜಾಗರಣೆ ಮಾಡಬೇಕು!!

ಉ ) ಮರುದಿನ ಬೆಳಿಗ್ಗೆ ಪ್ರಾತಃ ಕಾಲದಲ್ಲಿ ಎದ್ದು…

ಶಾಕಲ ಹೋಮ
ಪುರುಷಸೂಕ್ತ ಹೋಮ
ವಿರಜಾ ಹೋಮ

ಮಾಡಿ ಸಂನ್ಯಾಸವನ್ನು ಸ್ವೀಕರಿಸಬೇಕು! ಇಲ್ಲಿಗೆ ಸಂನ್ಯಾಸ ಸ್ವೀಕಾರ ಮಾಡಿದ ವ್ಯಕ್ತಿಗೂ – ಸಂನ್ಯಾಸ ಪೂರ್ವದಲ್ಲಿ ಅವರ ಸಂಬಂಧಿಗಳಾದ : –

ಹೆಂಡತಿ – ಮಕ್ಕಳು – ಬಂಧು ಬಾಂಧವರ ಸಂಬಂಧ ಸಂಪೂರ್ಣವಾಗಿ ಕಡೆದು ಹೋಗುತ್ತದೆ.

” ಸಂನ್ಯಾಸ ಪದ್ಧತಿ ”

ನಿಮಜ್ಯಾಪ್ಸು ತ್ರಿಶೋ ಹಸ್ತೇ ಶಿಖಾಯಜ್ಞೋಪವೀತಕೇ ।
ಆದಾಯ ಜುಹುಯಾದಪ್ಸು ಪ್ರಣವೇನ ಸಮಾಹಿತಃ ।।

ನೀರಿನಲ್ಲಿ ಮೂರುಬಾರಿ ಮುಳುಗಿ ಶಿಖಾ ಯಜ್ಞೋಪವೀತಗಳನ್ನು ಕೈಯಲ್ಲಿ ಹಿಡಿದು ” ವನಾಯ ಸ್ವಾಹಾ ” ಇತ್ಯಾದಿ ಮಂತ್ರಗಳಿಂದ ಅವುಗಳನ್ನು ನೀರಿನಲ್ಲಿ ವಿಸರ್ಜಿಸಿ ಪ್ರಣವದಿಂದ ಭಗವಂತನನ್ನು ಧ್ಯಾನಿಸಬೇಕು.

ಅನಂತರ ಗೃಹಸ್ಥನು ನೀಡುವ ಕಟಿಸೂತ್ರ – ಕೌಪೀನ ಮತ್ತು ಎರಡು ಕಾವಿಶಾಟಿಗಳನ್ನು ಧಾರಣೆ ಮಾಡಿಕೊಂಡು..

” ಸಂನ್ಯಸ್ತಂ ಮಯಾ ”

ಎಂದು ವಿಧಿವತ್ತಾಗಿ ಗಟ್ಟಿಯಾಗಿ ಉಚ್ಛರಿಸಬೇಕು.

ಅನಿರುದ್ಧಾದಿ ಭಗವದ್ರೂಪಗಳಿಗೆ ವಿತ್ತ – ದೇಹ – ಇಂದ್ರಿಯ – ಅಂತಃಕರಣ – ಸ್ವಾತ್ಮಗಳನ್ನು ಸಮರ್ಪಿಸಬೇಕು.

ಮಂತ್ರ ಪೂರ್ವಕ ದಂಡಧಾರಣೆ ಮಾಡಬೇಕು.

ಪ್ರಣವಮಂತ್ರೋಪದೇಶಕರಾದ ಗುರುಗಳು ತಪ್ತ ಮುದ್ರಾಧಾರಣೆ – ತಂತ್ರಸಾರೋಕ್ತ ವಿಧಿಯಿಂದ ಪೂಜಿತವಾದ ” ಪಟ್ಟಾಭಿಷೇಕ ಕಲಶ ತೀರ್ಥ ” ವನ್ನು ಶಿಷ್ಯನಿಗೆ ” ಶಂ ನಃ ” ಇತ್ಯಾದಿ ಸೂಕ್ತ ಮತ್ತು ಪುರುಷ ಸೂಕ್ತ ಮಂತ್ರಗಳಿಂದ ಪ್ರೋಕ್ಷಿಸಿ ಅಭಿಷೇಕ ಮಾಡಬೇಕು.

” ವಿಷ್ಣು ಸರ್ವೋತ್ತಮತ್ವ ಪ್ರತಿಪಾದನೆ ಪ್ರತಿಪಾದನೆ ಜೀವನದ ಉಸಿರಾಗಿರಬೇಕೆಂದೂ; ನಿರಂತರ ಶಾಸ್ತ್ರ ಪಾಠ ಪ್ರವಚನ ಪ್ರಣವ ಜಪಾದ್ಯಾಸಕ್ತನಾಗಿ ಸಂನ್ಯಾಸ ದೀಕ್ಷೆಯ ಉದ್ಧೇಶವನ್ನು ಸಾರ್ಥಕಗೊಳಿಸಬೇಕೆಂದೂ ” ಉಪದೇಶಿಸಬೇಕು!

ಸಂನ್ಯಾಸ ಪಡೆದ ವ್ಯಕ್ತಿಯಲ್ಲಿ ” ಸಾಕ್ಷಾತ್ ಶ್ರೀಮನ್ನಾರಾಯಣನ ಸನ್ನಿಧಾನ ” ಬರುತ್ತದೆ. ಆಗ ಅವರು ” ಸಾರ್ವಜನಿಕ ಸ್ವತ್ತು ” ಆಗುತ್ತಾರೆ. ಇವರಿಗೆ ಯಾವುದೇ ಪ್ರಾಪಂಚಿಕ ಸಂಬಂಧಗಳು ಇರುವುದಿಲ್ಲ. ಇವರು ಸರ್ವತಂತ್ರ ಸ್ವತಂತ್ರರಾಗುತ್ತಾರೆdownload (1)

ಕೃಪೆ  – Nagraj

Leave a comment